ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರಕ್ಕೆ ವಿಶ್ವಾಸಮತದ ಪರೀಕ್ಷೆ; ಕೊನೆ ಕ್ಷಣದಲ್ಲಿ ಕೈಕೊಡ್ತಾರ ಪೈಲಟ್?


(ಗಲ್ಫ್ ಕನ್ನಡಿಗ)ನವದೆಹಲಿ;  ರಾಜಸ್ಥಾನ  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ದ ಬಂಡಾಯವೆದ್ದು ತಿಂಗಳ ಬಳಿಕ ರಾಜಿಯಾದ ಡಿಸಿಎಂ ಸಚಿನ್ ಪೈಲಟ್ ನಡೆ ಇಂದು ಗೊತ್ತಾಗಲಿದೆ.

(ಗಲ್ಫ್ ಕನ್ನಡಿಗ)ರಾಜಸ್ಥಾನದಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ.  ಈ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ.  ಈ ಸಂದರ್ಭದಲ್ಲಿ ಸಚಿನ್ ಪೈಲಟ್ ತಂಡ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

(ಗಲ್ಫ್ ಕನ್ನಡಿಗ)ಮೇಲ್ನೋಟಕ್ಕೆ ಕಾಂಗ್ರೆಸ್ ನಲ್ಲಿ ಉಂಟಾದ ವೈಮನಸ್ಸು ಸರಿಯಾದ ರೀತಿಯಲ್ಲಿ ಕಾಣಿಸುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಂಡಾಯವೆದ್ದ ಡಿಸಿಎಂ ಸಚಿನ್ ಪೈಲಟ್ ಒಬ್ಬರನ್ನೊಬ್ಬರು ಭೇಟಿಯಾಗಿ ನಗುನಗುತ್ತಾ ಮಾತಾಡಿದ್ದಾರೆ.  ಸಚಿನ್ ಜೊತೆಗೆ ಹೋಗಿದ್ದ ಬೆಂಬಲಿಗರು ಕಾಂಗ್ರೆಸ್ ಗೆ ಮರಳಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿದ್ದೇವೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

(ಗಲ್ಫ್ ಕನ್ನಡಿಗ)ಆದರೆ ಇದರ ನಡುವೆ ಇಂದು ನಡೆಯುವ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಿದೆ. ಈ ಸಂದರ್ಭದಲ್ಲಿ ಸಚಿನ್ ಪೈಲಟ್ ಗುಂಪು ತೆಗೆದುಕೊಳ್ಳುವ ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ

(ಗಲ್ಫ್ ಕನ್ನಡಿಗ)