
ಮದುವೆಯಾಗಿ 22 ತಿಂಗಳಾದರೂ ಸೆಕ್ಸ್ ಗೆ ಒಪ್ಪದ ಪತ್ನಿ; ಪತಿ ಮಾಡಿದ್ದೇನು ಗೊತ್ತಾ?
Saturday, August 15, 2020
(ಗಲ್ಫ್ ಕನ್ನಡಿಗಹೈದರಾಬಾದ್ ; ಮದುವೆಯಾಗಿ 22 ತಿಂಗಳಾದರೂ ಸೆಕ್ಸ್ ಗೆ ಪತ್ನಿ ಒಪ್ಪದೆ ಇರುವುದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗಹೈದರಾಬಾದ್ ನ ಸುರೇಂದ್ರ ಸಿಂಗ್ ಪತ್ನಿಯ ವರ್ತನೆಯಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
(ಗಲ್ಫ್ ಕನ್ನಡಿಗಸುರೇಂದ್ರ ಸಿಂಗ್ ಮತ್ತು ಗೀತಾಳ ಮದುವೆ 2018 ಅಕ್ಟೋಬರ್ ನಲ್ಲಿ ನಡೆದಿತ್ತು. ಸುರೇಂದ್ರ ಸಿಂಗ್ ಗೆ ಇದು ಎರಡನೇ ಮದುವೆಯಾದರೆ ಗೀತಾಗೆ ಇದು ಮೂರನೇ ಮದುವೆ. ಸುರೇಂದ್ರ ಮೊದಲ ಪತ್ನಿಯಿಂದ 2016 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದ. ಗೀತಾಳು ತನ್ನೆರಡು ಮದುವೆಯಿಂದ ವಿಚ್ಚೇದನ ಪಡೆದುಕೊಂಡಿದ್ದಳು.
(ಗಲ್ಫ್ ಕನ್ನಡಿಗಮದುವೆಯಾಗಿ 22 ತಿಂಗಳಾದರೂ ಸುರೇಂದ್ರ ಗೀತಾಳ ಜೊತೆ ದೈಹಿಕ ಸಂಬಂಧ ಬೆಳೆಸಲು ಸಾಧ್ಯವಾಗಿಲ್ಲ. ಗೀತಾ ದೈಹಿಕ ಸಂಪರ್ಕ ನಡೆಸಲು ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಇದೇ ವಿಷಯದಲ್ಲಿ ಇವರಿಬ್ಬರ ನಡುವೆ ಜಗಳವು ನಡೆಯುತ್ತಿತ್ತು. ಜಗಳದ ಬಳಿಕ ಗೀತಾ ತವರು ಮನೆಗೆ ಹೋಗಿದ್ದಳು.
(ಗಲ್ಫ್ ಕನ್ನಡಿಗಮನೆಯಲ್ಲಿ ಯಾರೂ ಇಲ್ಲದಾಗ ಸುರೇಂದ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
(ಗಲ್ಫ್ ಕನ್ನಡಿಗ ಸುರೇಂದ್ರ ಆತ್ಮಹತ್ಯೆ ಬಳಿಕ ಸುರೇಂದ್ರ ತಾಯಿ ಪೊಲೀಸರಿಗೆ ಸುರೇಂದ್ರ ಪತ್ನಿ ಗೀತಾಳ ವಿರುದ್ಧ ದೂರು ಕೊಟ್ಟಿದ್ದಾರೆ . ಪತಿ ಪತ್ನಿ ಬೇರೆ ಬೇರೆ ಮಲಗುತ್ತಿದ್ದಾಗ ಮಗನಲ್ಲಿ ವಿಚಾರಿಸಿದೆ. ಆಗ ಪತ್ನಿ ದೈಹಿಕ ಸಂಪರ್ಕ ನಡೆಸಲು ಬಿಡುತ್ತಿಲ್ಲ ಎಂದು ಹೇಳಿದ್ದ. ಅದನ್ನು ಆಕೆಯಲ್ಲಿ ವಿಚಾರಿಸಿದಾಗ ಆಕೆ ಗಂಡನೊಂದಿಗೆ ಮಲಗಲು ಇಷ್ಟವಿಲ್ಲ ಎಂದು ಹೇಳಿದ್ದಳು. ಇದರಿಂದ ಮಗ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಆತ್ಮಹತ್ಯೆ ಗೆ ಗೀತಾಳೆ ಪ್ರಚೋದನೆ ನೀಡಿದ್ದಾಳೆ ಎಂದು ದೂರು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)