ಬೆಂಗಳೂರು ಪ್ರಕರಣ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಯತ್ನ; ಕಾರವಾರದಲ್ಲಿ 20 ಕ್ಕೂ ಹೆಚ್ಚು ಮಂದಿ ವಿಚಾರಣೆ
Friday, August 14, 2020
ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು ಜನರು ಮೃತಪಟ್ಟಿದ್ದರು,ಈ ಹಿನ್ನಲೆಯಲ್ಲಿ ಘಟನೆಯನ್ನು ಖಂಡಿಸಿ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಕೆಲವು ಸಂಘಟನೆಯ ಪುಂಡರು
ಸಾಮಾಜಿಕ ಜಾಲತಾಣಗಳಲ್ಲಿ , ಧಾರ್ಮಿಕ ಮತ್ತು ಕೊಮು ಭಾವನೆಗಳಿಗೆ
ಧಕ್ಕೆ ತರುವಂತ ಮತ್ತು, ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಸಂದೇಶಗಳನ್ನು ಹರಿ ಬಿಡುವ ಮೂಲಕ ಸಮಾಜದ ಜನರಲ್ಲಿ ಅಶಾಂತಿ,ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಸುಮಾರು ೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ತೀವ್ರ ವಿಚಾರಾಣೆ ನಡೆಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದಾರೆ.
ಸಾಮಾಜೀಕ ಜಾಲತಾಣಗಳಲ್ಲಿ ಧಾರ್ಮಿಕ ಕೋಮು ಸೌಹಾರ್ದತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಮತ್ತು ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ, ಪ್ರಚೋಧನಾಕಾರಿ ಹೇಳಿಕೆ, ಸಂದೇಶ,ವಿಡಿಯೋ ಹರಿಬಿಟ್ಟಲ್ಲಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.