ಕೊರೊನಾ ಬಂದು ಗುಣವಾಗುವ ಹೊತ್ತಿಗೆ ಬರುತ್ತೆ ಪಾಸಿಟಿವ್ ರಿಪೋರ್ಟ್; ಮಂಗಳೂರಿನಲ್ಲಿ ಸ್ವಾಬ್ ರಿಪೋರ್ಟ್ ಕೈ ಸೇರಿದ್ದು 10 ದಿನದ ಬಳಿಕ!
Monday, August 31, 2020
(ಗಲ್ಫ್ ಕನ್ನಡಿಗ)ಮಂಗಳೂರು; ಕೊರೊನಾ ಟೆಸ್ಟ್ ಗಾಗಿ ಗಂಟಲುದ್ರವ ನೀಡಿ
10 ದಿನದ ಬಳಿಕ ವ್ಯಕ್ತಿಯೊಬ್ಬರಿಗೆ ಆರೋಗ್ಯ ಇಲಾಖೆ ಪಾಸಿಟಿವ್ ರಿಪೋರ್ಟ್ ನೀಡಿ ಬೆಸ್ತು ಬೀಳಿಸಿದೆ.
(ಗಲ್ಫ್ ಕನ್ನಡಿಗ)ಇವರಿಗೆ ಆರೋಗ್ಯ ಇಲಾಖೆ ಪ್ರಕಾರ ಹತ್ತು ದಿನದ ಹಿಂದೆಯೆ ಕೊರೊನಾ ಪಾಸಿಟಿವ್ ಇದೆ. ಆದರೆ ಅದು ಗೊತ್ತಾದದ್ದು ಹತ್ತು ದಿನದ ಬಳಿಕ. ಅದು ಗುಣವಾಗುವ ಸಮಯದಲ್ಲಿ!
ಏನಾಗಿತ್ತು?
(ಗಲ್ಫ್ ಕನ್ನಡಿಗ) ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಮಂಗಳೂರಿನ ಈ ವ್ಯಕ್ತಿ ಆಗಷ್ಟ್ 19 ರಂದು ಗಂಟಲು ದ್ರವ ಮಾದರಿ ಪರೀಕ್ಷೆ ಗೆ ನೀಡಿದ್ದರು. ಆರೋಗ್ಯ ಇಲಾಖೆ ಸೂಚನೆಯಂತೆ ಆಗಷ್ಟ್ 28 ವರೆಗೆ ಕ್ವಾರಂಟೈನ್ ನಲ್ಲಿಯು ಅವರು ಇದ್ದರು. ಆದರೆ ಆವರೆಗೆ ಅವರ ಗಂಟಲು ದ್ರವ ಟೆಸ್ಟ್ ರಿಪೋರ್ಟ್ ನೀಡದ ಆರೋಗ್ಯ ಇಲಾಖೆ ಆಗಷ್ಟ್ 29 ಕ್ಕೆ ಅವರ ರಿಪೋರ್ಟ್ ಸಿದ್ದಪಡಿಸಿದೆ.
ಅವರಿಗೆ ಪಾಸಿಟಿವ್ ಇದೆ ಎಂದು ರಿಪೋರ್ಟ್ ನ್ನು ನಿನ್ನೆ ಅವರಿಗೆ ತಿಳಿಸಿದೆ. ಈಗಾಗಲೇ ಗಂಟಲು ದ್ರವ ಕೊಟ್ಟು ಒಂದು ಬಾರಿ ಕ್ವಾರಂಟೈನ್ ನಲ್ಲಿ ಇದ್ದ ಇವರು ಮತ್ತೆ ಕ್ವಾರಂಟೈನ್ ನಲ್ಲಿ ಇರಬೇಕಾಗಿದೆ. ಆ್ಯಂಟಿಜೆನ್ ಟೆಸ್ಟ್ ನಲ್ಲಿ 15 ರಿಂದ 20 ನಿಮಿಷದಲ್ಲಿ ಫಲಿತಾಂಶ ಬರುವ ವ್ಯವಸ್ಥೆ ಇರುವಾಗ ಇವರ ರಿಪೋರ್ಟ್ ಬರಲು 10 ದಿನ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
(ಗಲ್ಫ್ ಕನ್ನಡಿಗ)