ಗಲ್ಫ್ ಕನ್ನಡಿಗ ಸ್ಥಾಪಕ ಬಿ ಜಿ ಮೋಹನ್ ದಾಸ್ ಇನ್ನಿಲ್ಲ

(ಗಲ್ಫ್ ಕನ್ನಡಿಗ)ಉಡುಪಿ; ಗಲ್ಫ್ ಕನ್ನಡಿಗ. ಕಾಮ್ ಸ್ಥಾಪಿಸಿದ ಹಿರಿಯ ಪತ್ರಿಕೋದ್ಯಮಿ ಬಿ ಜಿ ಮೋಹನ್ ದಾಸ್ ಇಂದು ನಿಧನರಾಗಿದ್ದಾರೆ.

(ಗಲ್ಫ್ ಕನ್ನಡಿಗ)ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅನಾರೋಗ್ಯದಿಂದ ಮಣಿಪಾಲ ಕೆ ಎಂ ಸಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದ್ದರು.

(ಗಲ್ಫ್ ಕನ್ನಡಿಗ)ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿರುವಾಗಲೇ ಎರಡು ದಶಕಗಳ ಹಿಂದೆ ಗಲ್ಫ್ ಕನ್ನಡಿಗ .ಕಾಮ್ ವೆಬ್ ಸೈಟ್ ಆರಂಭಿಸಿದ್ದರು.  ಅವರು ಆರಂಭಿಸಿದ ಗಲ್ಫ್ ಕನ್ನಡಿಗ ವೆಬ್ ಸೈಟ್ ವಿದೇಶದಲ್ಲಿ ಆರಂಭವಾದ ಕನ್ನಡದ ಮೊದಲ ವೆಬ್ ಸೈಟ್ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದೆ. 

(ಗಲ್ಫ್ ಕನ್ನಡಿಗ)ಅವರಿಗೆ 2019 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರಕಾರ ಗೌರವಿಸಿದೆ.  ಪತ್ನಿ , ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.

(ಗಲ್ಫ್ ಕನ್ನಡಿಗ)