-->

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಾಲೋಚನ ಸಭೆಗೆ ಎಬಿವಿಪಿಗೆ ಮಾತ್ರ ಆಹ್ವಾನ ನೀಡಿದ ಮಂಗಳೂರು ವಿವಿ; ಎನ್ ಎಸ್ ಯು ಐ ಪ್ರತಿಭಟನೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಾಲೋಚನ ಸಭೆಗೆ ಎಬಿವಿಪಿಗೆ ಮಾತ್ರ ಆಹ್ವಾನ ನೀಡಿದ ಮಂಗಳೂರು ವಿವಿ; ಎನ್ ಎಸ್ ಯು ಐ ಪ್ರತಿಭಟನೆ


 (ಗಲ್ಫ್ ಕನ್ನಡಿಗ)   ಮಂಗಳೂರು: ನೂತನ ರಾಷ್ಟ್ರೀಯ ನೀತಿಗೆ ಸಂಬಂಧಿಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ  ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆಯೋಜಿಸಲಾದ ಸಮಾಲೋಚನಾ ಕಾರ್ಯಕ್ರಮಕ್ಕೆ ಎಬಿವಿಪಿ ಸಂಘಟನೆಗೆ ಮಾತ್ರ ಆಹ್ವಾನ ನೀಡಿರುವುದನ್ನು ವಿರೋಧಿಸಿ ಎನ್ ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


(ಗಲ್ಫ್ ಕನ್ನಡಿಗ) ಕಾರ್ಯಕ್ರಮಕ್ಕೆ ಇತರ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಎನ್.ಎಸ್.ಯು.ಐ ನೇತೃತ್ವದಲ್ಲಿ  ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎದುರು ಪ್ರತಿಭಟನೆ ನಡೆಯಿತು.



(ಗಲ್ಫ್ ಕನ್ನಡಿಗ) ಎನ್.ಎಸ್.ಯು.ಐ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ವಿರುದ್ಧ ಘೋಷಣೆಗೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


(ಗಲ್ಫ್ ಕನ್ನಡಿಗ)ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಮಂಗಳೂರು ವಿವಿಯ ಕುಲಪತಿ ಎಬಿವಿಪಿ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸದೆ, ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ದೇಶದಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳಿದ್ದರೂ ಅವುಗಳ ಜೊತೆ ಚರ್ಚಿಸದೆ ಕೇಂದ್ರ ಸರ್ಕಾರವು ಏಕಾಏಕಿಯಾಗಿ ಹೊಸ ಶಿಕ್ಷಣ ನೀತಿಗೆ ಮುಂದಾಗಿದೆ ಎಂದು ಆರೋಪಿಸಿದರು.


 (ಗಲ್ಫ್ ಕನ್ನಡಿಗ)ಶಿಕ್ಷಣವನ್ನು ಕೇಸರಿಕರಣಗೊಳಿಸುವ ಹುನ್ನಾರಕ್ಕೆ ಕೇಂದ್ರ ಮುಂದಾಗಿದೆ. ಇದು ಶಿಕ್ಷಣದ ಕೇಸರಿಕರಣದ ಹುನ್ನಾರ ಎಂದು ಅವರು  ಆರೋಪಿಸಿದರು.

ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರು ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೂಲಕ ಎಬಿವಿಪಿಯ ಕೈಗೊಂಬೆ ತರ  ವರ್ತನೆ ಮಾಡುತ್ತಿದ್ದಾರೆ‌ . ಇದು ಖಂಡನೀಯ ಎಂದು ಆರೋಪಿಸಿದರು.



(ಗಲ್ಫ್ ಕನ್ನಡಿಗ)Nsui ಜಿಲ್ಲಾ ಉಪಾಧ್ಯಕ್ಷ ಶೌವಾದ್ ಗೂನಡ್ಕ ರವರು ಮಾತನಾಡಿ, ರಾಜ್ಯ ಸರ್ಕಾರದೊಂದಿಗೆ ಹಾಗೂ ಸಂಸತ್ತಿನಲ್ಲಿ ಚರ್ಚೆ ಮಾಡದೇ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದ್ದು ಇದೀಗ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳು ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಮೂಲಕ ಎಬಿವಿಪಿಯವರೊಂದಿಗೆ ಸೇರಿ ನೂತನ ಶಿಕ್ಷಣ ನೀತಿಯ ಕುರಿತ ಕಾರ್ಯಕ್ರಮವನ್ನು ಆಯೋಜಿಸಿರುವುದು ಸರಿಯಲ್ಲ ಎಂದು ಹೇಳಿದರು.



(ಗಲ್ಫ್ ಕನ್ನಡಿಗ)ಪ್ರತಿಭಟನೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ ಅಧ್ಯಕ್ಷ ಶೌನಕ್ ರೈ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೌಹಾಸ್, ಶೇಖ್ ಅಫ್ಸಾನ್, ಎನ್.ಎಸ್.ಯು.ಐ  ಆರ್.ಟಿ.ಐ ಸೆಲ್ ಕೋರ್ಡಿನೇಟರ್ ಅನ್ವಿತ್ ಕಟೀಲ್, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಬಾತೀಶ್ ಅಳಕೆಮಜಲು, ಎನ್.ಎಸ್.ಯು.ಐ   ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಝೈನ್ ಆತೂರು, ಎನ್.ಎಸ್.ಯು.ಐ  ಸುಳ್ಯ ಉಪಾಧ್ಯಕ್ಷ ಆಶಿಕ್ ಆರಂತೋಡು, ಎನ್.ಎಸ್.ಯು.ಐ  ಬಂಟ್ವಾಳ ಅಧ್ಯಕ್ಷ ವಿನಯ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಅಂಕುಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99