10 ಹಸುಗೂಸು ಸೇರಿದಂತೆ 190 ಪ್ರಯಾಣಿಕರಿದ್ದ ವಿಮಾನ ಕೇರಳದ ಕೊಯಿಕ್ಕೋಡ್ ನಲ್ಲಿ ಪತನ
ಪೈಲೆಟ್ ಸೇರಿ 16 ಮಂದಿ ದುರ್ಮರಣ
123 ಮಂದಿಗೆ ಗಾಯ
15 ಜನರ ಸ್ಥಿತಿ ಗಂಭೀರ
(ಗಲ್ಪ್ ಕನ್ನಡಿಗ)ಕೊಯಿಕ್ಕೋಡ್: ದುಬೈನಿಂದ 184 ಪ್ರಯಾಣಿಕರನ್ನು ಹೊತ್ತು ಕೇರಳದ ಕೊಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ರನ್ವೇಗೆ ಅಪ್ಪಳಿಸಿದೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಕೇರಳದ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ. ವಿಮಾನ ರನ್ ವೇ ಗೆ ಅಪ್ಪಳಿಸಿದ ರಭಸಕ್ಕೆ ವಿಮಾನ ಎರಡು ಹೋಳಾಗಿದೆ ಎಂದು ತಿಳಿದುಬಂದಿದೆ. ಅವಘಡದಲ್ಲಿ ಪೈಲೆಟ್ ಸೇರಿ 16 ಮಂದಿ ಸಾವನ್ನಪ್ಪಿದ್ದು, 123 ಪ್ರಯಾಣಿಕರು ಗಾಯಗೊಂಡಿದ್ದಾರೆ.
(ಗಲ್ಪ್ ಕನ್ನಡಿಗ)ಭಾರಿ ಮಳೆಯಾಗುತ್ತಿದ್ದ ವೇಳೆ ಲ್ಯಾಂಡ್ ಆಗುತ್ತಿದ್ದಾಗ ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಅವಘಡಕ್ಕೀಡಾಗಿದೆ. ವಿಮಾನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಭರದಿಂದ ನಡೆಯುತ್ತಿದೆ. ವಿಮಾನದಲ್ಲಿ ಇಬ್ಬರು ಪೈಲಟ್ಗಳು, 4 ಮಂದಿ ಸಿಬ್ಬಂದಿ, 10 ಹಸುಗೂಸು ಸೇರಿ ಒಟ್ಟು 191 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ
ಘಟನೆಯಲ್ಲಿ 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ 25 ಕ್ಕೂ ಅಧಿಕ ಆಂಬುಲೆನ್ಸ್ ಗಳು ರಕ್ಷಣಾ ಕಾರ್ಯಚರಣೆಗೆ ಸಿದ್ದವಾಗಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ