ಕದ್ರಿ ಕಂಬಳದಲ್ಲಿ ಅಪಘಾತ :ಗಾಯಾಳು ಯುವತಿಯನ್ನು ತನ್ನ ಕಾರಲ್ಲೇ ಆಸ್ಪತ್ರೆ ಸೇರಿಸಿದ ಮಾಜಿ ಸಚಿವ ಖಾದರ್(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಕದ್ರಿ ಕಂಬಳದ್ಲಿ ಇಂದು ನಡೆದ ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಮಾಜಿ ಸಚಿವ ಯು ಟಿ ಖಾದರ್ ತನ್ನ ಕಾರಿನಲ್ಲಿಯೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

 

ಅಪಘಾತದ ಭೀಕರ ದೃಶ್ಯ ಮತ್ತು ಯು ಟಿ ಖಾದರ್ ಅವರು ಕಾರಿನಲ್ಲಿ ಕೊಂಡೊಯ್ಯುವ ದೃಶ್ಯದ ಸಿಸಿಟಿವಿ ವಿಡಿಯೋಗಾಗಿ ಈ ಲಿಂಕ್ ತೆರದು ನೋಡಿ 


(ಗಲ್ಪ್ ಕನ್ನಡಿಗ)ಮಂಗಳೂರಿನ ಕದ್ರಿ‌ ಕಂಬಳದಲ್ಲಿ ವಾಣಿಶ್ರೀ ಭಟ್ (22) ಅವರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಯುವತಿ ಕಾರಿನ ಅಡಿಗೆ ಸಿಲುಕಿದ್ದರು. ಆಕೆಯನ್ನು ಸ್ಥಳೀಯರು ರಕ್ಷಣೆ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವ ಯು ಟಿ ಖಾದರ್ ಅವರ ಕಾರು ಅದೇ ದಾರಿಯಲ್ಲಿ ಬಂದಿದೆ. ಅಪಘಾತವನ್ನು ಗಮನಿಸಿದ ಅವರು ತಮ್ಮ ಕಾರಿನಲ್ಲಿ ಗಾಯಾಳು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ. 

ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 


(ಗಲ್ಪ್ ಕನ್ನಡಿಗ)ಪುತ್ತೂರು ತಾಲೂಕಿನ ಕೆದಿಲ ನಿವಾಸಿ ವಾ‍ಣಿಶ್ರೀ ಭಟ್ ಅವರು ಗಂಭೀರ ಗಾಯಗೊಂಡಿದ್ದು ಇದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾ‍ಣಿಶ್ರೀ ಅವರನ್ನು ಕಾರು ಢಿಕ್ಕಿ ಹೊಡೆದು ಕೊಂಡೊಯ್ಯು ಭೀಕರ ದೃಶ್ಯ ಮತ್ತು ಮಾಜಿ ಸಚಿವ ಯು ಟಿ ಖಾದರ್ ಅವರು ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ