-->

ತಾನು ತನ್ನದೆಂಬ ಭಾವನೆ ಬೇಕೇ? -✍️ಶ್ವೇತಾ ಪಿ ಜೈನ್ ಕಲ್ಲುಗುಡ್ಡೆ

ತಾನು ತನ್ನದೆಂಬ ಭಾವನೆ ಬೇಕೇ? -✍️ಶ್ವೇತಾ ಪಿ ಜೈನ್ ಕಲ್ಲುಗುಡ್ಡೆ

✍️ಶ್ವೇತಾ ಪಿ ಜೈನ್ ಕಲ್ಲುಗುಡ್ಡೆ(shwetha p jain, kallugudde)

(ಗಲ್ಪ್ ಕನ್ನಡಿಗ ಸುದ್ದಿ) 
 ಮನಸ್ಸಿನ ಭಾವನೆಯನ್ನು ಹೇಳುವ ಸಮಯವಿದು.....
ಈ ಜಗತ್ತು ಯಾಕೆ ಹೀಗೆ? ಎನ್ನುವ ಪ್ರಶ್ನೆ ಇಂದು ತುಂಬಾನೇ ಕಾಡುತ್ತಿದೆ‌. ಖಂಡಿತಾ ಇದಕ್ಕೆ ಕಾರಣವಾಗಿರುವ ಸನ್ನಿವೇಶ ಜೀವನ ನಶ್ವರ ಎಂಬ ಭಾವನೆಯನ್ನು ನನ್ನಲ್ಲಿ ತಂದು ಹಾಕಿತು.. ಹೌದು! ಇಂದು ೧೫ ಜುಲೈ ೨೦೨೦ ಬೆಳಿಗ್ಗೆ ಸರಿಯಾಗಿ ೧೦:೫೩ರ ಹೊತ್ತಿಗೆ ನಾನು ನನ್ನ ವ್ಯಾಟ್ಸಾಪ್ ನಲ್ಲಿ ಒಂದು ಸ್ಟೇಟಸ್ ಹಾಕಿದೆ. ಅದು ಇಂತಿದೆ:
"ಪ್ರತೀ ಬಾರಿ ಪಲಿತಾಂಶ ಬಂದಾಗ ದಕ್ಷಿಣ ಕನ್ನಡ ಪ್ರಥಮ ಸ್ಥಾನ
ಬಿಜಾಪುರ ಕೊನೇಯ ಸ್ಥಾನ


ಸರಕಾರಿ ಉದ್ಯೊಗಿಗಳ ಪಟ್ಟಿಯಲ್ಲಿ ಬಿಜಾಪುರ ಪ್ರಥಮ ಸ್ಥಾನ 

ದಕ್ಷಿಣ ಕನ್ನಡ ಕೊನೇಯ ಸ್ಥಾನ


ಬದುಕಲಿಕ್ಕೆ ಬೇಕಾದ್ದು ಮಾರ್ಕು ಅಲ್ಲ ಕೆಲಸ"
ಆದರೆ ಇದು ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಎಂತಹ ಪ್ರತಿಕ್ರಿಯೆಗಳು ಬಂದವೆಂದರೇ ಆ ಜನರ ಮನಸ್ಸು ಹೇಗೋ ನನಗೆ ತಿಳಿದಿಲ್ಲ. ಆದರೆ ಅವರ ಪ್ರತ್ಯುತ್ತರಗಳಲ್ಲಿ 'ತಾನು ತನ್ನದೆಂಬ ಸ್ವಾರ್ಥ ಭಾವನೆ' ಎದ್ದು ಕುಣಿಯ ತೊಡಗಿತ್ತು. ಒಬ್ಬೊಬ್ಬರದ್ದು ಒಂದೊಂದು ರೀತಿಯ ವ್ಯಾಖ್ಯಾನ, ಆಗಲೇ ಈ ಜಗತ್ತು ಯಾಕೆ ಹೀಗೆ? ಎನ್ನುವ ಪ್ರಶ್ನೆ ಮೂಡಿದ್ದು. ಹಾಗಾದರೆ ನಾವು ಮಾಡಿದ್ದು ಮಾತ್ರ ಸರೀನಾ?, ಬೇರೇಯವರು ಯಾವಾಗಲೂ ತಪ್ಪನ್ನೇ ಮಾಡುತ್ತಾರಾ ಅಥವಾ ನಾವೆಲ್ಲರೂ ತಾವು ತನ್ನದೆಂಬ ಭಾವನೆಯಲ್ಲಿ ಅಂಧರಾಗಿದ್ದೇವಾ? ಈ ಪ್ರಶ್ನೆಗಳು ನಮ್ಮನ್ನು ಯಾಕೆ ಯಾವತ್ತೂ ಕಾಡಲೇ ಇಲ್ಲಾ......?, ಬಹುಶಃ ಮೊದಲೇ ಮೂಡಿದ್ದರೇ ಇವತ್ತು ನನಗೆ ಇಂತಹ ಪ್ರತ್ಯುತ್ತರಗಳು ಸಿಗ್ತಾನೇ ಇರಲಿಲ್ಲವೇನೋ.....

(ಗಲ್ಪ್ ಕನ್ನಡಿಗ ಸುದ್ದಿ) 
ತಾವು ತಮ್ಮದು ಅಂತ ಯೋಚಿಸೋ ಜನರು, ಯಾಕೆ ನಮ್ಮ ದೇಶ, ನಮ್ಮ ಜನ ಅಂತ ಯೋಚನೆ ಮಾಡಲ್ಲ... ಬಹುಶಃ ಅದು ಅವರ ಅರಿವಿಗೆ ಬರಲೇ ಇಲ್ಲವಾ?..... ಹಾಗಾದರೆ ಅರಿವಿಗೆ ಬಂದವರೂ ಇಂತಹವರ ನಡುವೆ ಇದ್ದಾಗ ತಾವು ಪಟ್ಟ ಪ್ರಯತ್ನ, ಕಷ್ಟಗಳು ಎಲ್ಲವನ್ನು ವ್ಯರ್ಥ ಅಂತಲೇ ತಿಳಿದುಕೊಳ್ಳಬೇಕಾ?.
ಆದರೆ ಇಷ್ಟೆಲ್ಲಾ ಗೊಂದಲಗಳು ಉಂಟಾದಾಗ ನನ್ನಗನ್ನಿಸಿದೊಂದೇ ನಾನು ದಕ್ಷಿಣ ಕನ್ನಡದವಳು ಅಲ್ಲಾ... ಬಿಜಾಪುರದವಳು ಅಲ್ಲಾ. ಮತ್ತೆ ನನಗೆ ಯಾಕೆ ಬೇಕು ಈ ಸ್ಟೇಟಸ್, ವಾದ-ಪ್ರತಿವಾದ ಎಲ್ಲಾ.. ಹೌದು, ಆದರೆ ನಾವೆಲ್ಲರೂ ಸಮಾನರು ಎಂಬ ಯೋಚನೆ ನನ್ನಲ್ಲಿ ಮೂಡಿದಾಗ ನಾನು ಮಾಡಿದ ಯೋಚನೆಗಳು ಸರಿ ಅನ್ನಿಸಿತು.
ನನ್ನ ಯೋಚನೆ ಹೀಗೆ ಎರಡೂ ಜಿಲ್ಲೆಗಳಿರೋದು ಒಂದೇ ನೆಲದಲ್ಲಿ, ಸಹೋದರತ್ವ ಎಂಬುದು ಭಾರತಕ್ಕೆ ಹುಟ್ಟಿನಿಂದಲೇ ಜೊತೆ ಜೊತೆಯಾಗಿ ಬಂದ ಸಿಹಿ ಸಂಬಂಧ. ಇದನ್ನು ತೊರೆಯುವ ಅವಶ್ಯಕತೆ ಏನಿದೆ? ತಾನು ತಮ್ಮದು ಅಂತ ಮುಂದುವರೆದರೇ ನಮಗೆ ಸಾಧನೆಯ ಮಾರ್ಗಗಳು ತೆರೆಯುತ್ತವಾ? ಖಂಡಿತಾ ಅಲ್ಲ, ಯಾಕೆಂದರದು ಪ್ರಾಮಾಣಿಕ ಪ್ರಯತ್ನ ಎಂಬ ಸದ್ಗುಣಕ್ಕೆ ದೊರೆಯಬೇಕಾದ ಫಲದ ಮಾರ್ಗ.
ಕೆಲವರ ಪ್ರತ್ಯುತ್ತರ ಹೀಗಿತ್ತು: ಇಲ್ಲಿ ಲಂಚದ ಮಹಿಮೆ ಇರಬಹುದೇನೋ? ಎಂದು. ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ, ಯಾಕೆಂದರದು ಭ್ರಷ್ಟಾಚಾರ ಎಂಬುದು ಕಪ್ಪು ಚುಕ್ಕಿಯಾಗಿದೆ, ಭರತ ವರ್ಷದಲ್ಲಿ. ಆದರೇ ಈ ಚುಕ್ಕಿಯಿಂದ ಪ್ರಾಮಾಣಿಕತೆಯಿಂದ ದೊರೆತ ಫಲಕ್ಕೆ ಬೆಲೆಯೇ ಇಲ್ವಾ?. ಇಡೀ ಜಿಲ್ಲೆ ಲಂಚ ಕೊಡೋಕೇ ಸಾಧ್ಯವಿರೋದೇ ಆದರೇ ಭಾರತದಲ್ಲಿ ಬಡತನ ಅನ್ನೋದಕ್ಕೆ ಜಾಗ ಇರುತ್ತಿತ್ತಾ?, ಲಂಚ ಕೊಡೋ ಕೆಲವೇ ಮಂದಿಯಿಂದ ಪ್ರಾಮಾಣಿಕರು ತಲೆ ತಗ್ಗಿಸಿರೋ ಈ ಯುಗದಲ್ಲಿ ನ್ಯಾಯಕ್ಕೆ ಬೆಲೇನೇ ಇಲ್ವಾ?. ಹೌದು! ಪ್ರಾಮಾಣಿಕ ಪ್ರಯತ್ನ ಅನ್ನೋದನ್ನ ಎಲ್ಲರೂ ಮಾಡಲ್ಲ. ಹೌಗಂತ ಎಲ್ಲರನ್ನೂ ದೂಷಿಸೋದು ಮೂರ್ಖತನದ ಪರಮಾವಧಿಯಾಗುತ್ತದೆ.
ಹಾಗಿದ್ದರೆ ಇಲ್ಲಿ ಉತ್ತಮ ಅಂಕ ಪಡೆದವರಿಗೆ ಬೆಲೇನೇ ಇಲ್ವಾ?, ಖಂಡಿತಾ ಇದೆ. ವರ್ಷದ ಕೊನೆಯಲ್ಲಿ ನಡೆಯುವ ಪರೀಕ್ಷೆಗೆ ಒಂದು ವರ್ಷವೆಲ್ಲಾ ಕಷ್ಟಪಟ್ಟದ್ದೀವಿ ಫಲ ಇಲ್ವಾ ಅಂದರೇ, ಇದೆಯಲ್ಲಾ ಉತ್ತಮ ಅಂಕದ ಮೂಲಕ, ಆದರೆ ಕೆಲಸ ಜೀವನದ ದಿಕ್ಕನ್ನು ಬದಲಾಯಿಸುತ್ತೆ, ತಮ್ಮ ಜವಾಬ್ದಾರಿಗಳು ಹೆಚ್ಚಾಗುವ ಸಮಯವದು. ಹಾಗಿದ್ದಾಗ ಅದಕ್ಕೆ ಪ್ರಾಯಶಃ ಅಂಕಕ್ಕಾಗಿ ಮುಡಿಪಾಗಿಟ್ಟಂತಹ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದ ಅಗತ್ಯವಿದೆ. ಕೇವಲ ಅಂಕ ಗಳಿಸಿ ನಮಗೆ ಕೆಲಸ ನೀಡಿ ಎಂದರೆ ಅದು ಹೇಗೆ ಸಾಧ್ಯ, ಅದಕ್ಕೂ ಕೂಡ ಪ್ರಯತ್ನದ ಹಾದಿಯಲ್ಲಿ ನಡೆಯುವುದು.....ಪ್ರಾಕೃತಿಕ ನಿಯಮವಲ್ಲವೇ?. ಕೇವಲ ಚಹಾ ಮಾರುವವ ಇಂದು ದೇಶದ ಪ್ರಧಾನಿಯೆಂದರೇ ಕೇವಲ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರ ಫಲವೇ ಪ್ರಧಾನಿಯ ಹುದ್ದೆಯೇ?, ಖಂಡಿತಾ ಅಲ್ಲಾ... ತದನಂತರ ಅವರ ಗುರಿಯೊಂದಿಗೆ ಅವರು ನಡೆದ ಹಾದಿಯಲ್ಲಿ ಹಾಕಿದ ಶತಪ್ರಯತ್ನ. ಹೀಗೆ ಉತ್ತಮ ಅಂಕ ಪಡೆಯಲು ಒಂದು ವರ್ಷದ ಪ್ರಯತ್ನವನ್ನೇ ಪಟ್ಟಿರುವವರಿಗೇ, ಜೀವನ ಸಾಗಿಸಲು ಬೇಕಾದದ್ದು ವೃತ್ತಿ ಬದುಕು ಇದಕ್ಕೆ ಶ್ರಮ ಹಾಕಲು ಯೋಚನೆ ಯಾಕೆ?.
(ಗಲ್ಪ್ ಕನ್ನಡಿಗ ಸುದ್ದಿ) 
ಇನ್ನೂ ಕೆಲವರು ಲಂಚ ಕೇಳಿದರು ಎಂಬುದಕ್ಕಾಗಿ ಕೆಲಸ ಬೇಡವೆಂದು ತೀರ್ಮಾನಿಸಿದವರು, ಲಂಚಕ್ಕೆ ವಿರುದ್ಧವಾಗಿ ಪ್ರಶ್ನೆ ಮಾಡುವ ಹಕ್ಕು ಅವಶ್ಯವಾಗಿ ನಮಗಿದೆ, ಹೋರಾಟದ ಕಡೆ ಕೂಡ ಪಯಣ ಸಾಗಿಸಬಹುದು. ಕೇವಲ ಕೆಲಸಕ್ಕಾಗಿ ಹೋರಾಟ ಎಂಬ ಭಾವನೆಯನ್ನು ಬದಿಗಿರಿಸಿ...ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಫಲ ಹೇಗೆ ನಿಮ್ಮದಾಗಿರುತ್ತದೋ ಹಾಗೆ ಪ್ರಾಮಾಣಿಕ ಹೋರಾಟಕ್ಕೆ ಕೂಡಾ.
(ಗಲ್ಪ್ ಕನ್ನಡಿಗ ಸುದ್ದಿ) 
ಜಗತ್ತಿನ ಸೃಷ್ಟಿ ಎಷ್ಟು ಅದ್ಭುತವೆಂದರೇ, 'ಆಗುವುದೆಲ್ಲಾ ಒಳ್ಳೆಯದಕ್ಕೆ' ಎಂಬ ಮಾತಿದೆ. ನಿರುದ್ಯೋಗದ ಸಮಸ್ಯೆ ಇದರಿಂದಾಗಿ ಕೆಡುಕಗಳೇ ಹೆಚ್ಚು, ಆದರೆ ಒಳಿತು ಕೂಡ ಇದೆ. ಪ್ರಾರಂಭದಿಂದಲೂ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೋ, ಸಹನೆಯಿಂದ ಏಳು-ಬೀಳುಗಳನ್ನು ದಾಟುತ್ತಾರೋ, ಬೇರೆಯವರ ಏಳಿಗೆಯನ್ನು ಖುಷಿಯಿಂದ ಸ್ವೀಕರಿಸುತ್ತಾರೋ ಅವರೇ ಫಲದ ಆನುಭವಿಗಳಾಗುತ್ತಾರೆ. ಇದೆಲ್ಲದರಿಂದ ಹೊರತಾಗಿರುವವರು ಕಡೆಗೆ ನಿರುದ್ಯೋಗದಿಂದ ಬಳಲುತ್ತಾರೆ. ಆದರೆ ನೆನಪಿಡಿ ನಿರುದ್ಯೋಗಿಗಳೆಲ್ಲರೂ ಸ್ವಾರ್ಥಿಗಳೇ ಆಗಿರುವುದಿಲ್ಲ. ನಿರುದ್ಯೋಗದಿಂದ ಕಂಗೆಟ್ಟರೂ ಕೂಡ ಭೂಮಾತೆಯ ಮಡಿಲಿಂದ ಅನ್ನ ರೂಪದ ಅಗಾಧ ಮಮತೆಯನ್ನು ಅವರು ಪ್ರತಿಯೊಬ್ಬರಿಗೂ ನೀಡುತ್ತಾರೆ ಬೇಧವಿಲ್ಲದೇ. ಹಾಗಾಗಿ ಅವರು ಕೂಡ ಉದ್ಯೋಗಸ್ಥರೇ, ಇನ್ನೂ ಹಲವರು ಇನ್ನಿತರ ಉದ್ಯೋಗಗಳಲ್ಲಿ ತೊಡಗಿರುವುದನ್ನು ನಾವು ಕಾಣಬಹುದು, ಇವೆಲ್ಲವೂ ಫಲದ ಮಹಿಮೆಯೇ. ಮೊದಲು ತಾನು-ತನ್ನದು ಎಂಬುದನ್ನು ಬಿಟ್ಟು, ನಾವು-ನಮ್ಮವರು ಎಂಬ ಭಾವನೆಯೆಡೆಗೇ ಸಾಗೋಣ. ಯಾರೋ ಸಾಧಿಸಿದರೆಂದು ಅಸೂಯೆ ಪಡುವುದರ ಬದಲಿಗೆ, ಇಂತಹ ಸಾಧಕರು ನಮ್ಮ ನೆಲದಲ್ಲಿದ್ದಾರಲ್ಲಾ ಎಂದು ಸಂಭ್ರಮಿಸೋಣ. ಆಗ ಆ ಒಳ್ಳೆಯ ತನಕ್ಕೆ ಎಂದು ಸಾವಿಲ್ಲ..... ಇದರಿಂದ ನಮ್ಮ ಪಾಲಿಗೆ ಫಲ ಎಂಬುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99