ಟ್ಯೂಷನ್ ಗೆ ಹೋಗದ ಗಗನ್ ದೀಪ್ ಗೆ ದ್ವಿತೀಯ ಪಿಯುಸಿಯಲ್ಲಿ 96 ಶೇಕಡಾ ಅಂಕ


(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು: ಮಂಗಳೂರಿನ ಸೋಮೇಶ್ವರದ ಕೊಲ್ಯದ ಮಲ್ಯಾಲಕೋಡಿಯ ಗಗನ್ ದೀಪ್ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 96 ಶೇಕಡ ಅಂಕ ಪಡೆದುಕೊಂಡಿದ್ದಾರೆ.

(ಗಲ್ಪ್ ಕನ್ನಡಿಗ ಸುದ್ದಿ)  ರಾಮಚಂದ್ರ ಮತ್ತು ಹೇಮಲತಾ ಅವರ ಪುತ್ರನಾಗಿರುವ ಗಗನ್ ದೀಪ್ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿ. ಇವರು 575 ಅಂಕವನ್ನು ಪಡೆದಿದ್ದಾರೆ. ಮ್ಯಾಥಮೆಟಿಕ್ಸ್ ನಲ್ಲಿ 100 ಕ್ಕೆ  100 ಅಂಕ ಪಡೆದ ಇವರು ENGLISH ನಲ್ಲಿ 93, HINDIಯಲ್ಲಿ 92, ,PHYSICS  ನಲ್ಲಿ 98, CHEMISTRY ಯಲ್ಲಿ 93, COMPUTER SCIENCE ನಲ್ಲಿ 99 ಅಂಕ ಪಡೆದುಕೊಂಡಿದ್ದಾರೆ. ಯಾವುದೇ ಟ್ಯೂಷನ್ ಗೆ ಹೋಗದೆ  ಗಗನ್ ದೀಪ್  ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.(ಗಲ್ಪ್ ಕನ್ನಡಿಗ ಸುದ್ದಿ)