10ನೇ ಸಿಬಿಎಸ್ಇ ಪರೀಕ್ಷೆ ಯಲ್ಲಿ ನಮನ್ ಎ ಜೈನ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ
Wednesday, July 15, 2020
ಮಂಗಳೂರು,ಜು.15 ರೋಟರಿ ಸ್ಕೂಲ್ ನ ಸಿಬಿಎಸ್ಸಿ 10ನೇ ತರಗತಿಯ ವಿದ್ಯಾರ್ಥಿ ನಮನ್ ಎ ಜೈನ್ ಮೂಡುಕೊಣಾಜೆ ರವರು ಶೇಕಡಾ 96.2 (500 ರಲ್ಲಿ 481) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆ.
ಈತ ಮೂಡುಬಿದಿರೆ ಮೂಡುಕೊಣಾಜೆ ( ತ್ರೈರತ್ನ) ಅಶ್ವತ್ಥ್ ಜೈನ್ ಹಾಗೂ ಸವಿತಾ ಎ ಜೈನ್ ಮೂಡುಕೊಣಾಜೆ ದಂಪತಿಗಳ ಪುತ್ರ.
ನಮನ್ ಎ ಜೈನ್ ನೃತ್ಯ ಕ್ಷೇತ್ರದಲ್ಲಿ ಸಹ ತನ್ನನ್ನು ತಾನು ತೊಡಗಿಸಿಕೊಂಡು ಈ ಸಾಧನೆ ಮಾಡಿರುವುದು ಅಭಿನಂದನಾರ್ಹ. ನಮನ್ ರ ಸಾಧನೆಗೆ ಶಾಲೆಯ ಅನೇಕ ಪ್ರಾಚಾರ್ಯರು ಮತ್ತು ಸುದೇಶ್ ಜೈನ್ ಮಕ್ಕಿಮನೆ ಅಭಿನಂದಿಸಿದ್ದಾರೆ.