-->

ಬೆಳೆಯುವ ಸಿರಿ ಮೊಳಕೆಯಲ್ಲಿ :ಈಕೆ ಕರಾವಳಿಯ ಅದ್ಬುತ ಪ್ರತಿಭೆ ಶ್ರೇಯಾ

ಬೆಳೆಯುವ ಸಿರಿ ಮೊಳಕೆಯಲ್ಲಿ :ಈಕೆ ಕರಾವಳಿಯ ಅದ್ಬುತ ಪ್ರತಿಭೆ ಶ್ರೇಯಾ

(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು ನಿವಾಸಿಗಳಾದ ಸುದೇಶ್ ಕುಮಾರ್ ಮಂಗಳೂರು ಹಾಗೂ ಪ್ರಿಯದರ್ಶಿನಿ ಜೈನ್ ದಂಪತಿಗಳ ಪುತ್ರಿ ಶ್ರೇಯಾ ಎಸ್ ಜೈನ್ ಮಂಗಳೂರು ನೃತ್ಯ, ನಿರೂಪಣೆ,ಚಿತ್ರ ಕಲೆ, ಕ್ರೀಡೆ, ಬಾಷಣ, ಹಾಡುಗಾರಿಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಗೈಯುತ್ತಿದ್ದಾಳೆ.  
(ಗಲ್ಪ್ ಕನ್ನಡಿಗ ಸುದ್ದಿ) ಈಕೆ ಅತಿ ಕಿರಿಯ ವಯಸ್ಸಿನಲ್ಲೆ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ಸ್ಪರ್ಧೆ ಯಲ್ಲಿ ಭಾಗವಹಿಸಿ ಬಾಲಿವುಡ್ ನ ಹೆಸರಾಂತ ನೃತ್ಯ ಗುರು (ದಿವಂಗತ) ಸರೋಜ್ ಖಾನ್ ಅವರಿಂದ ಮೆಚ್ಚುಗೆ ಪಡೆದು ಪ್ರಥಮ ಸ್ಥಾನ ವಿಜೇತೆಯಾಗಿ ಬಂಗಾರದ ಪದಕ ಪಡೆದಿದ್ದಾಳೆ. 
ಈಟಿವಿ ಕನ್ನಡ ಹಾಗೂ ಈಟಿವಿ ತೆಲುಗು ವಾಹಿನಿಗಳ ಡಿ - ಜ್ಯೂನಿಯರ್ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಸ್ಪರ್ಧಿಯಾಗಿ ಹಾಗೂ ಕಲರ್ಸ್ ಕನ್ನಡ ವಾಹಿನಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಅಮೃತ ವರ್ಷಿಣಿ ಧಾರಾವಾಹಿಯ ನಟಿ ರಜನಿ ಜೊತೆ ಒಂದು ವಿಶೇಷ ಸಂಚಿಕೆ ಯಲ್ಲಿ  ನೃತ್ಯ ಮಾಡಿ ತೀರ್ಪುಗಾರಿಂದ ಹಾಗೂ ಆ ಕಾರ್ಯಕ್ರಮಗಳಿಗೆ ಬರುತ್ತಿದ್ದ ವಿಶೇಷ ಅತಿಥಿವಾರ್ಯರಿಂದ  ಪ್ರಶಂಸೆಗೆ ಪಾತ್ರರಾಗಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಇನ್ನು 3ನೇ ತರಗತಿ ಯಲ್ಲಿ ಇರುವಾಗಲೇ ಮಂಗಳೂರಿನ ಸಹಾಯ ಟಿವಿ ಯಲ್ಲಿ *ಪುಟಾಣಿ ಬಟಾಣಿ* ಎಂಬ ನೇರ ಪೋನ್ -ಇನ್ ಕಾರ್ಯಕ್ರಮದ ನಿರೂಪಕಿಯಾಗಿ ಅನೇಕ ದಿನಗಳವರೆಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೋಟ್ಟು ಜನ ಮೆಚ್ಚುಗೆ ಪಡೆದು ನಂತರದ ದಿನಗಳಲ್ಲಿ ರಾಜ್ಯಾದ್ಯಂತ 300 ಕ್ಕೂ ಅಧಿಕ ವೇದಿಕೆ ಗಳಲ್ಲಿ ನೃತ್ಯ, ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುತ್ತಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರಿನ ವಿ4 ನ್ಯೂಸ್, ಡೈಜಿ ವರ್ಲ್ಡ್ ನ್ಯೂಸ್, ಉಡುಪಿಯ ಮುಕ್ತ ಟಿವಿ ,ಸ್ಪಂದನ ವಾಹಿನಿ,ನಮ್ಮ ಟಿವಿ, ಚಾನಲ್ ಒನ್, ನಮ್ಮ ಕುಡ್ಲ ನ್ಯೂಸ್ ಚಾನೆಲ್.  ಗಳು , ಮಂಗಳೂರು 93.5 ರೆಡ್ ಎಫ್. ಎಮ್, 92.7 ಬಿಗ್ ಎಫ್. ಎಮ್ ಗಳು ಶ್ರೇಯಾ ನ ಜೊತೆಗೆ ಈಕೆಯ ಸಂದರ್ಶನ ಮಾಡಿವೆ. ಹಾಗೂ ಈಗಲೂ ಅನೇಕ ಬಾರಿ ನಮ್ಮ ಕುಡ್ಲ ನ್ಯೂಸ್ ಹಾಗೂ ನಮ್ಮ ಟಿವಿ ಗಳಲ್ಲಿ ಪ್ರೈಮ್ ಟೈಮ್ ಡಿಬೇಟ್ ಗಳಲ್ಲಿ ಅತಿಥಿ ಯಾಗಿ  ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದ್ದಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಈಕೆಯ ಸಾಧನೆಯನ್ನು ಗುರುತಿಸಿ ಅಜೆಕಾರಿನಲ್ಲಿ ನಡೆದ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ *ಕರ್ನಾಟಕ ಪ್ರತಿಭಾ ರತ್ನ*  ಪುರಸ್ಕಾರ, ಮಂಗಳೂರಿನಲ್ಲಿ 2017 ರಲ್ಲಿ ನಡೆದ ಚೆನ್ನೈ ಯಕ್ಷಗಾನ ಸಂಭ್ರಮದಲ್ಲಿ *ಕಲ್ಕೂರ ಬಾಲಸಿರಿ ಪ್ರಶಸ್ತಿ*, ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ಇಟಗಿ ಉತ್ಸವ *ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ* 
2017 ರಲ್ಲಿ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ದ. ಕ ಜಿಲ್ಲಾ *ರಾಜ್ಯೋತ್ಸವ ಸಾಧಕ ಪುರಸ್ಕಾರ* ಸಹಿತ ಇನ್ನು ಅನೇಕ ಪ್ರಶಸ್ತಿ ,ಪುರಸ್ಕಾರಗಳನ್ನು ಪಡೆದೀರುತ್ತಾರೆ.

(ಗಲ್ಪ್ ಕನ್ನಡಿಗ ಸುದ್ದಿ)  ಜೈನ್ ಮಿಲನ್, ಜೆ. ಸಿ. ಐ, ರೋಟರಿ ಕ್ಲಬ್, ಪ್ರೆಸ್ ಕ್ಲಬ್, ಹೀಗೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ. ಮಂಗಳೂರು ಪಾಂಡೇಶ್ವರ ಕಾರ್ಮೇಲ್ ಸ್ಕೂಲ್ ನ ಹೆಮ್ಮೆಯ  ವಿಧ್ಯಾರ್ಥಿನಿ ಯಾಗಿದ್ದು ಈವರ್ಷ ನಡೆದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಯಲ್ಲಿ ಶೇಕಡಾ 81.41(500ರಲ್ಲಿ 406) ಅಂಕ ಪಡೆದ  ತೇರ್ಗಡೆ ಆಗಿದ್ದಾರೆ .
(ಗಲ್ಪ್ ಕನ್ನಡಿಗ ಸುದ್ದಿ) ಮಕ್ಕಿಮನೆ ಕಲಾವೃಂದ ಮಂಗಳೂರು ತಂಡದ ನೆಚ್ಚಿನಸದಸ್ಯೆ ಯಾಗಿದ್ದು ಹೆಚ್ಚಿನ ಎಲ್ಲ ಕಾರ್ಯಕ್ರಮಗಳೂ ಶ್ರೇಯಾ ಜೈನ್ ಇರುತ್ತಾರೆ. 
ಈಕೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಿ ಬೆಳಗಿ, ನಮ್ಮ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದುಕೊಡಲಿ ಎಂಬುವುದು ನಮ್ಮ ಎಲ್ಲರ ಶುಭ ಹಾರೈಕೆ. 
🖊️
ಸುದೇಶ್ ಜೈನ್ ಮಕ್ಕಿಮನೆ 
(9620898052 )

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99