
ಸುಳ್ಯದ ಸುಪ್ರೀತಾ ಕೆ.ಎಸ್ ಅವರು ಮಿಸೆಸ್ ಕರ್ನಾಟಕ -2020 ಪ್ರಶಸ್ತಿಗೆ ಆಯ್ಕೆ
Saturday, July 18, 2020
(ಗಲ್ಪ್ ಕನ್ನಡಿಗ ಸುದ್ದಿ) ಸುಳ್ಯ: BANK OF BARODA ಉದ್ಯೋಗಿಯಾಗಿರುವ ಸುಳ್ಯದ ಸುಪ್ರೀತಾ ಕೆ.ಎಸ್ (SUPRITHA K S) ಅವರು ಮಿಸೆಸ್ ಕರ್ನಾಟಕ -2020(MRS KARNATAKA 2020) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಮೈಸೂರಿನ R R GROUPS (ರಾಕಿಂಗ್ ರತು ಗ್ರೂಪ್ಸ್) ಪ್ರತಿವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ವರ್ಷದ ಕಿರೀಟವನ್ನು ಸುಳ್ಯದ ಸುಪ್ರೀತ ಕೆ.ಎಸ್ ಗೆದ್ದುಕೊಂಡಿದ್ದಾರೆ.ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿದ್ದು, ಗೆದ್ದ ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್‌ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.
(ಗಲ್ಪ್ ಕನ್ನಡಿಗ ಸುದ್ದಿ) MRS KARNATAKA ಆಗಿ ಆಯ್ಕೆಯಾಗಿರುವ ಸುಪ್ರೀತಾ ಕೆ.ಎಸ್. ರವರು ಸುಳ್ಯ ಬೀರಮಂಗಲ ನಿವಾಸಿ K V G ENGINEERING COLLEGEನ ಉಪನ್ಯಾಸಕ ಅಜಿತ್ ಬಿ.ಟಿ. ಯವರ ಪತ್ನಿ, 8 ವರ್ಷದ ಪುತ್ರ ಇಶಾನ್ ನ ತಾಯಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರವರ ಸೊಸೆ.
(ಗಲ್ಪ್ ಕನ್ನಡಿಗ ಸುದ್ದಿ) ನಿವೃತ್ತ SYNDICATE BANK ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಸುಪ್ರೀತಾ ಉಡುಪಿಯಲ್ಲಿ ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದರು. ಬಳಿಕ ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಗೊಂಡರು. ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕರಕುಶಲತೆ, ಗಾರ್ಡನಿಂಗ್ ಹವ್ಯಾಸ ಹೊಂದಿರುವ ಇವರು 2008 ರಲ್ಲಿ ಬಿ.ಬಿ.ಎಂ. ಪದವಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು