ಭ್ರಷ್ಟಾಚಾರ ಆರೋಪ ಮಾಡುವವರ ಹಿನ್ನೆಲೆ ಗಮನಿಸಬೇಕು; ನಳಿನ್ ಕುಮಾರ್ ಕಟೀಲ್ ತಿರುಗೇಟು
Saturday, July 25, 2020
(ಗಲ್ಪ್ ಕನ್ನಡಿಗ)ಮಂಗಳೂರು; ಬಿಜೆಪಿ ಸರಕಾರ ಭ್ರಷ್ಟಾಚಾರವೆಸಗಿದ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರೀಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದವರು ಮೊದಲು ಅವರವರ ಹಿನ್ನಲೆಯನ್ನು ಗಮನಿಸಬೇಕು ಎಂದು ಹೇಳಿದ್ದಾರೆ
(ಗಲ್ಪ್ ಕನ್ನಡಿಗ)ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಐವರು ಸಚಿವರು ಈಗಾಗಲೆ ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಕಾಂಗ್ರೇಸ್ ನ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ . ಆದರೂ ಕಾಂಗ್ರೇಸ್ಸಿಗರು ಆರೋಪದಲ್ಲಿ ನಿರತರಾಗಿದ್ದಾರೆ.ಆರೋಪ ಮಾಡುವ ಕಾಂಗ್ರೇಸ್ ನ ರಾಷ್ಟ್ರೀಯ ಅಧ್ಯಕ್ಷರು ,ಪಕ್ಷದ ಮಾಜಿ ಅಧ್ಯಕ್ಷರೂ , ಕಾಂಗ್ರೇಸ್ ನ ರಾಜ್ಯಾಧ್ಯಕ್ಷರೂ ಜಾಮೀನಿನಲ್ಲಿ ಇದ್ದಾರೆ.ಅವರ ಕೇಸ್ ಗಳ ಹಿನ್ನಲೆ ಗಮನಿಸಿದ್ರೆ ಅವರ ಭ್ರಷ್ಟಾಚಾರ ಏನು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು