ಕೊರೋನಾ ನಡುವೆಯೂ ಕಾಲೇಜು ಫೀಸು ಕಟ್ಟಲು ಒತ್ತಾಯಿಸುತ್ತಿರುವ ಕಾಲೇಜಿನ ನಡೆ ಖೇದನೀಯ:NSUI ಸುಳ್ಯ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಆಶೀಕ್ ಅರಂತೋಡು
(ಗಲ್ಪ್ ಕನ್ನಡಿಗ) ಸುಳ್ಯ: ಕೊರೋನಾದಿಂದ ಜನಸಾಮಾನ್ಯರು ಆರ್ಥಿಕವಾಗಿ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪೂರ್ಣ ಪ್ರಮಾಣದ ಫೀಸು ಜುಲೈ 31ರ ಒಳಗಾಗಿ ಕಟ್ಟಬೇಕೆಂದು ಸುತ್ತೋಲೆ ಹೊರಡಿಸಿದ ವಿಷಯ ಖೇದನೀಯ ಎಂದು NSUI ಸುಳ್ಯ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಆಶೀಕ್ ಅರಂತೋಡು ತಿಳಿಸಿದ್ದಾರೆ
(ಗಲ್ಪ್ ಕನ್ನಡಿಗ) ಇಡೀ ಪ್ರಪಂಚವೇ ಕೊರೋನಾದ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವಾಗ, ಜನರು ಕೆಲಸವಿಲ್ಲದೇ ಮನೆಯಲ್ಲೇ ಇರುವಾಗ ಸುಳ್ಯದ ಇಂಜಿನಿಯರಿಂಗ್ ಕಾಲೇಜು ಮಾತ್ರ ಫೀಸ್ ದಂದೆಗೆ ಇಳಿದಿದೆಯೇ ಎನ್ನುವ ಸಂಶಯವು ಕಾಡಿದೆ.ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳಿಗೆ ಯಾವುದೇ ಸ್ಕಾಲರ್ಶಿಪ್ ಅಥವಾ ಅರಿವು ಲೋನ್ ಬಂದಿಲ್ಲ. ಅದರೊಂದಿಗೆ ಹೆತ್ತವರಿಗೆ ಉದ್ಯೋಗವೂ ಇಲ್ಲ. ಈ ನಡುವೆ ಕಾಲೇಜಿನ ಈ ವಿದ್ಯಾರ್ಥಿ ವಿರೋಧಿ ತೀರ್ಮಾನ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
(ಗಲ್ಪ್ ಕನ್ನಡಿಗ) ಕಾಲೇಜು ವಿದ್ಯಾರ್ಥಿಗಳ ಹಾಗೂ ಪೋಷಕರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಫೀಸ್ ಕಟ್ಟಲು ಈಗಾಗಲೇ ಹೊರಡಿಸಿರುವ ದಿನಾಂಕವನ್ನು ಮುಂದೂಡಬೇಕು ಮತ್ತು ಸೂಕ್ತ ಸಮಯಾಕಾಶವನ್ನು ನೀಡಬೇಕೆಂದು NSUI ಸುಳ್ಯ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಆಶೀಕ್ ಅರಂತೋಡು ಆಗ್ರಹಿಸಿದ್ದಾರೆ .ಸಮಯಾವಕಾಶ ನೀಡದೆ ಇದ್ದಲ್ಲಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.