
ಜೈ ಜೈ ವಿವೇಕಾನಂದ ಮ್ಯೂಸಿಕ್ ಅಲ್ಬಂನ ಪೋಸ್ಟರ್ ಬಿಡುಗಡೆ
(ಗಲ್ಪ್ ಕನ್ನಡಿಗ) ಮಂಗಳೂರು: ಸೋಲ್ಸ್ ರಿದಂ ತಂಡದದಿಂದ ದೇಶ ಕಂಡ ಮಹಾನ್ ಸಂತ ಶ್ರೀ ವಿವೇಕಾನಂದ ಸ್ವಾಮಿಗಳ ಕುರಿತಾಗಿ ಯುವಜನತೆಗೆ ಪ್ರೇರಣೆ ಯಾಗುವಂತಹ ಜೈ ಜೈ ಸ್ವಾಮಿ ವಿವೇಕಾನಂದ ಎಂಬ ಮ್ಯೂಸಿಕ್ ಆಲ್ಬಂ ನ ಪೋಸ್ಟರ್ ನ್ನು ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿಗಳು ಬಿಡುಗಡೆಗೊಳಿಸಿದರು.
(ಗಲ್ಪ್ ಕನ್ನಡಿಗ) ವಿಶೇಷವಾಗಿ ಕನ್ನಡ, ತುಳು, ಹಿಂದಿ, ಇಂಗ್ಲೀಷ್ ನಾಲ್ಕು ಬಾಷೆಗಳಲ್ಲಿ ಈ ಆಲ್ಬಮ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸೋಲ್ಸ್ ರಿದಂ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಗೊಳ್ಳಲಿದೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಂಗೀತಕ್ಕೆ ವಿಜೇಶ್ ದೇವಾಡಿಗ ಮಂಗಳಾದೇವಿ ಕನ್ನಡ ಹಾಗೂ ತುಳು ಸಾಹಿತ್ಯ ನೀಡಿದ್ದು ಹಿಂದಿ ಹಾಡಿಗೆ ಮೇಲ್ವಿನ್ ಆಂಟೋನಿ ಡಿಸೋಜಾ ,ಹಾಗೂ ಇಂಗ್ಲೀಷ್ ನಲ್ಲಿ ಜಯಪ್ರಕಾಶ್ ಸಿ ಎಸ್ ಸಾಹಿತ್ಯ ಬರೆದಿದ್ದು ಸಂಪೂರ್ಣ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ದೇರಳಕಟ್ಟೆ ಸುರೇಶ್ ಕ್ಯಾಮೆರಾ ಹಾಗೂ ಸುಹಾಸ್ ಸಂಕಲನ ಮತ್ತು ಪ್ರಚಾರಕಲೆಯಲ್ಲಿ ಸಹಕರಿಸಿದ್ದಾರೆ . ನಾಲ್ಕು ಬಾಷೆಗಳಲ್ಲಿಯೂ ಕನ್ನಡದ ಯುವ ಗಾಯಕಿ ಕೆಜಿಎಫ್ ಖ್ಯಾತಿಯ ಐರಾ ಉಡುಪಿ ದ್ವನಿಯಾಗಿದ್ದಾರೆ.
(ಗಲ್ಪ್ ಕನ್ನಡಿಗ) ಇದರ ಪೋಸ್ಟರ್ ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿ ಬಿಡುಗಡೆ ಗೊಳಿಸಿ ಶುಭಹಾರೈಸಿದರು . ಈ ಸಂದರ್ಭದಲ್ಲಿ ನಿರ್ದೇಶಕ ಜಯಪ್ರಕಾಶ್ ಸಿ ಎಸ್, ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಾಹಿತಿ ವಿಜೇಶ್ ದೇವಾಡಿಗ ಮಂಗಳಾದೇವಿ, ಛಾಯಾಗ್ರಹಕ ದೇರಳಕಟ್ಟೆ ಸುರೇಶ್ ಹಾಗೂ ತಂಡದವರಾದ ನಿರ್ದೇಶಕ ಶಿವಪ್ರಸಾದ್, ಮನೀಷ್ ಕುಲಾಲ್, ರವಿಶಂಕರ್ ಉಪಸ್ಥಿತರಿದ್ದರು.
(ಗಲ್ಪ್ ಕನ್ನಡಿಗ)