ಅಧಿಕಾರಿಗಳಿಗೆ ಬೆದರಿಸಲು, ಹಲ್ಲೆ ಮಾಡಲು ಇದು ಖಾದರ್ ಕಾಲವಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು (video)
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರ ವರ್ಗಾವಣೆ ವಿಚಾರ ಸಂಬಂಧಿಸಿ ಮಾಜಿ ಸಚಿವ ಯು ಟಿ ಖಾದರ್ ನೀಡಿದ ಹೇಳಿಕೆಯ ವಿರುದ್ದ ಪ್ರತಿಕ್ರಯಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗೆ ಬೆದರಿಸಲು, ಹಲ್ಲೆ ಮಾಡಲು ಇದು ಖಾದರ್ ಕಾಲವಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ) ಮಾಜಿ ಸಚಿವ ಖಾದರ್ ಅವರು "ಕಾನೂನು ಕೈಗೆತ್ತಿಕೊಂಡರೆ,ನೈತಿಕ ಪೋಲಿಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದರು.ಸರ್ಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬುವ ಬದಲು ಬಿಜೆಪಿ ಮುಖಂಡರುರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಮಾರಕ ಕೊರೋನಾ ಜನರನ್ನು ಉಸಿರುಗಟ್ಟಿಸುತ್ತಿದ್ದರೆ,ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳ ಉಸಿರುಗಟ್ಟಿಸುತ್ತಿದ್ದಾರೆ.......ಉತ್ತರಿಸು ಸರ್ಕಾರ #ನ್ಯಾಯ ಎಲ್ಲಿದೆ ? ?" ಎಂದು ಟ್ವೀಟ್ ಮಾಡಿದ್ದರು.
ಖಾದರ್ ಏನಂದ್ರು ? ಇದನ್ನು ಓದಿ
(ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹೇಳಿಕೆಯ ವಿಡಿಯೋ)
(ಗಲ್ಪ್ ಕನ್ನಡಿಗ)ಇದಕ್ಕೆ ಪ್ರತಿಕ್ರೀಯಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಲಕಾಲಕ್ಕೆ ರಾಜ್ಯ ಸರಕಾರ ಮಾಡುವಂತಹ ಸ್ವಾಭಾವಿಕ ವರ್ಗಾವಣೆಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ವರ್ಗಾವಣೆಯಾಗಿದೆ. ಅದಕ್ಕೆ ರಾಜಕೀಯ ಲೇಪ ಬಳಸಿ ಯು ಟಿ ಖಾದರ್ ಅವರು ಈ ಅಧಿಕಾರಿಯ ವರ್ಗಾವಣೆ ಮಾಡಿರುವ ಹಿಂದೆ ರಾಜಕೀಯ ಇದೆ ಎಂದು ಆಪಾದನೆ ಮಾಡಿದ್ದಾರೆ. ಬೆದರಿಕೆ ಹಾಕಿದವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಯು ಟಿ ಖಾದರ್ ಅವರು ತಮ್ಮ ಮಾತುಗಳನ್ನು ವಾಪಾಸು ಪಡೆಯಬೇಕು, ಸ್ವಾಭಾವಿಕವಾಗಿ ರಾಜ್ಯ ಸರಕಾರ ಮಡುವ ವರ್ಗಾವಣೆಯಂತೆ ದ. ಕ ಜಿಲ್ಲಾಧಿಕಾರಿ ವರ್ಗಾವಣೆಯಾಗಿದೆ. ಅವರಿಗೆ ಬೆದರಿಕೆ ಹಾಕಿದವರ ವಿರುದ್ದ ಗೃಹ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯು ಟಿ ಖಾದರ್ ಅವರ ಕಾಲದಲ್ಲಿ ಪೊಲೀಸರಿಗೆ ಬೆದರಿಕೆ, ಹಲ್ಲೆ, ಗೂಂಡಾಗಿರಿ ನಡೆಯುತ್ತಿತ್ತು. ಇವತ್ತು ಖಾದರ್ ಕಾಲ ಅಲ್ಲ ಎಂದು ಖಾದರ್ ಅವರು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ