ಬೆಂಡೆಕಾಯಿ ಬೆಳೆಗೆ ಔಷಧಿ ಸಿಂಪಡಣೆ - ತೋಟಗಾರಿಕೆ ಇಲಾಖೆ ಸೂಚನೆ


 (ಗಲ್ಪ್ ಕನ್ನಡಿಗ) ಬೆಂಡೆ ಬೆಳೆಯಲ್ಲಿ ಹಳದಿ ನಂಜು ರೋಗ- ಇದು ಬಿಳಿ ನೊಣದಿಂದ ಹರಡುವ ಒಂದು ವೈರಸ್ ರೋಗವಾಗಿದೆ. ಆರಂಭದಲ್ಲಿ ಸೋಂಕಿತ ಎಲೆಗಳು ಹಳದಿ ನಾಳಗಳನ್ನು ಮಾತ್ರ ತೋರಿಸುತ್ತದೆ, ನಂತರದ ಹಂತಗಳಲ್ಲಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.

  
  (ಗಲ್ಪ್ ಕನ್ನಡಿಗ) ನಿರ್ವಹಣೆ ಕ್ರಮಗಳು: ಆರಂಭಿಕ ಹಂತಗಳಲ್ಲಿ ರೋಗಭಾಧಿತ ಗಿಡಗಳನ್ನು ಕಿತ್ತು ಸುಡುವುದು, ಹಳದಿ ನಂಜು ರೋಗ ಹರಡುವ ಕೀಟಗಳ ನಿಯಂತ್ರಣಕ್ಕಾಗಿ 1.5 ಮಿ.ಲೀ. ಟ್ರೈಜೋಫಾಸ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು. ಸಾವಯವವಾಗಿ ನಿಯಂತ್ರಣ ಮಾಡಲು 5 ಮಿ.ಲೀ. ಬೇವಿನ ಎಣ್ಣೆ +1/2 ಪ್ಯಾಕೇಟ್ ಶ್ಯಾಂಪು ಅಥವಾ ಸೋಪ್ ನೀರನ್ನು ಒಂದು ಲೀಟರ್ ನೀರಿಗೆ ಹಾಕಿ ಗಿಡಗಳಿಗೆ ಸಿಂಪಡಣೆ ಮಾಡುವುದು.

ಹೆಚ್ಚಿನ ಮಾಹಿತಿಗೆ ಮಂಗಳೂರು ತೋಟಗಾರಿಕೆ ವಿಷಯ ತಜ್ಞ  ರಿಶಲ್ ಡಿಸೋಜ ಅಥವಾ ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬಹುದು ತೋಟಗಾರಿಗೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.