-->

ಮೂಡಬಿದಿರೆಯ ಏಕೈಕ ಜೆಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್: ಇವರ ಸಾಧನೆಯ ಹಾದಿ ವಿಭಿನ್ನ

ಮೂಡಬಿದಿರೆಯ ಏಕೈಕ ಜೆಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್: ಇವರ ಸಾಧನೆಯ ಹಾದಿ ವಿಭಿನ್ನ




ಲೇಖಕರು: ಸೂಪ್ತಾ ಜೈನ್ ಮಾರ್ನಾಡು


(ಗಲ್ಪ್ ಕನ್ನಡಿಗ) ಜೀವನದಲ್ಲಿ ಎಲ್ಲರೂ ಗುರುತಿಸುವ ಹಾಗೇ ಏನಾದರೂ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಬಹಳಷ್ಟು ಜನ ಆ ಗುರಿ ಮುಟ್ಟುವ ಹಾದಿ ಸುದೀರ್ಘವಾಗಿದ್ದಾಗ ಆಲಸ್ಯ, ನಿರಾಸೆ ಪ್ರತ್ಯಕ್ಷವಾಗಿ ಕಾರ್ಯಕ್ಷಮತೆಯನ್ನು ತಗ್ಗಿಸಿ ಬಿಡುತ್ತದೆ. ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ನಿರಂತರ ಪರಿಶ್ರಮ ಪಟ್ಟಾಗ ಮಾತ್ರ ಯಶಸ್ಸು ಒಲಿಯುತ್ತದೆ. ಹೀಗೆ ತಮ್ಮ ಕಠಿಣ ಪರಿಶ್ರಮದ ಮೂಲಕ ಹಂತ ಹಂತವಾಗಿ ಬೆಳೆದು ವೃತ್ತಿ ಜೀವನದೊಂದಿಗೆ ಪ್ರವೃತ್ತಿಯಲ್ಲಿಯೂ ಸೈ ಎನಿಸಿಕೊಂಡು ರಾಷ್ಟ್ರೀಯ ಮಟ್ಟದ ಕೌಶಲ್ಯ ತರಬೇತುದಾರನಾಗಿ ಗುರುತಿಸಿಕೊಂಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಜೈನಕಾಶಿ ಮೂಡಬಿದ್ರೆಯ ಧೀರೇಂದ್ರ ಜೈನ್.


ಕಳೆದ ಎಂಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಎಲೆ ಮರಿಕಾಯಿಯಂತೆ ಸೇವೆಗೈಯುತ್ತಿರುವ ಇವರ ಕಿರು ಪರಿಚಯ. ಅಂದುಕೊಂಡಿದ್ದನ್ನು ಸಾಧಿಸಲು ಅವರು ಪಟ್ಟ ಕಠಿಣ ಶ್ರಮ, ಅವರು ನಡೆದ ಬಂದ ಹಾದಿ, ರಾಷ್ಟ್ರೀಯ ತರಬೇತಿದಾರನಾಗಲು ಅವರು ನಡೆಸಿದ ತಯಾರಿ ಸೇರಿದಂತೆ ಅವರ ಯಶೋಗಾಥೆ ಇಲ್ಲಿದೆ.


ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ




ಒಲ್ಲದ ಮನಸ್ಸಿನೊಂದಿಗೆ ಸೇರಿದ ಕ್ಷೇತ್ರ


(ಗಲ್ಪ್ ಕನ್ನಡಿಗ) ಆಳ್ವಾಸ್ ನರ್ಸಿಂಗ್ ಕಾಲೇಜಿನ ಮನಃ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ನಿರ್ವಹಿಸುತ್ತಿರುವ ಧೀರೇಂದ್ರ ಅವರಿಗೆ ಹೆಸರು ತಂದು ಕೊಟ್ಟಿದ್ದು ಜೆಸಿಐ. ಕಾಲೇಜು ದಿನಗಳಲ್ಲಿಯೇ ಮೂಡಬಿದಿರೆಯ ತ್ರಿಭುವನ್ ಜೆಸಿಐ ಬಳಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರ ಪರಿಣಾಮ ಈ ಯಶಸ್ಸು ಲಭಿಸಿದೆ ಎನ್ನುವ ಧೀರೇಂದ್ರ ಅವರಿಗೆ ಜೆಸಿಐ ಸೇರಲು ಇಷ್ಟವಿರಲಿಲ್ಲವಂತೆ. ಅವರ ಗುರುಗಳು ಹಿತೈಷಿಗಳು ಈ ಕ್ಲಬ್ ಬಗ್ಗೆ ತಿಳಿಸಿ ಹೇಳಿದ ಮೇಲೆ ಅವರ ಒತ್ತಾಯಕ್ಕೆ ಸೇರಿದೆ . ಆದರೆ ದಿನ ಕಳೆದಂತೆ ಜೆಸಿಐ ತಂಡದ ಕಾರ್ಯವೈಖರಿ, ಅಲ್ಲಿ ನಡೆಯುತ್ತಿದ್ದ ಜೀವನ ಕೌಶಲ್ಯ ತರಬೇತಿಗಳು ನನ್ನ ಬದುಕಿನ ದಿಕ್ಕು ಬದಲಾಯಿಸಿದೆ. ಒಲ್ಲದ ಮನಸ್ಸಿನೊಂದಿಗೆ ಸೇರಿದ ಕ್ಷೇತ್ರ ಇಂದು ನನಗೆ ನನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳಲು ನೆರವಾಗಿದ್ದು, ಓರ್ವ ಉತ್ತಮ ತರಬೇತುದಾರನಾಗಿ ಗುರುತಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳುತ್ತಾರೆ.




350ಕ್ಕೂ ಹೆಚ್ಚು ಕೌಶಲ್ಯ ತರಬೇತಿ ಕಾರ್ಯಗಾರ


(ಗಲ್ಪ್ ಕನ್ನಡಿಗ) ಇದುವರೆಗೂ ಸುಮಾರು 350ಕ್ಕೂ ಹೆಚ್ಚು ಕೌಶಲ್ಯ ತರಬೇತಿ ಕಾರ್ಯಗಾರ ನಡೆಸಿರುವ ಧೀರೇಂದ್ರ ಜೈನ್ ಅವರು ದಕ್ಷಿಣ ಕನ್ನಡದ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಕಾರ್ಯಾಗಾರ ನಡೆಸಿದ್ದು, ಶಿಕ್ಷಕರುಗಳು, ದಾದಿಯರು, ಜೆಸಿಐ ಸದಸ್ಯರಿಗೆ ಜೀವನ ಕೌಶಲ್ಯ ಸೇರಿದಂತೆ ಮನಸ್ಸಿಗೆ ಸಂಬಂಧಿಸಿದ ವಿಷಯಗಳ ಮೇಲೆಯೂ ತರಬೇತಿ ನಡೆಸಿದ್ದಾರೆ. ಸಲ್ಲದಕ್ಕೆ ಇವರಿಗೆ ರಂಗಭೂಮಿಯ ಹಿನ್ನೆಲೆಯೂ ಇದ್ದು, ಹಲವಾರು ನಾಟಕಗಳನ್ನು ನಿರ್ದೇಶಿಸುವುದರೊಂದಿಗೆ ಜಿಲ್ಲೆಯ ನಾನಾ ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶನವನ್ನು ನಡೆಸಿದ್ದಾರೆ. ಇನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಧೀರೆಂದ್ರ ಅವರು ಸೇವೆ ಸಲ್ಲಿದ್ದು, ಇವರ ನೇತೃತ್ವದಲ್ಲಿ 9 ವಿಶೇಷ ಶಿಬಿರಗಳು ನಡೆದಿವೆ. ಇದರೊಂದಿಗೆ ಇವರು ಉತ್ತರಖಂಡದ ಉತ್ತರಕಾಶಿಯಲ್ಲಿ ನಡೆದ ರಾಷ್ತ್ರೀಯ ಮಟ್ಟದ ಅಡ್ವೆಂಚರ್ ಕ್ಯಾಂಪ್ ಅಲ್ಲಿಯೂ ಪಾಲ್ಗೊಂಡಿದ್ದು, ಅರುಣಾಚಲ ಪ್ರದೇಶದಲ್ಲಿ ನಡೆದ ನಾರ್ಥ್ ಈಸ್ಟ್ ಕಲ್ಚರಲ್ ಫೇಸ್ಟ್ ಅಲ್ಲಿ ಕರ್ನಾಟಕ ತಂಡದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.




ಲಾಕ್‌ಡೌನ್ ಸಮಯವನ್ನು ಸದುಪಯೋಗ


(ಗಲ್ಪ್ ಕನ್ನಡಿಗ) ಇಂತಹ ಬಿಕ್ಕಟ್ಟಿನ ವೇಳೆ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯವಾಗಿದ್ದು, ಮನೋಸ್ಥೈರ್ಯ ಹೇಳುವವರ ಅವಶ್ಯ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‌ಡೌನ್ ಸಮಯವನ್ನು ಧೀರೇಂದ್ರ ಜೈನ್ ಅವರು ಸದುಪಯೋಗ ಪಡಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮನಶಾಸ್ತ್ರಕ್ಕೆ ಸಂಬಂಧಪಟ್ಟಂತೆ ವೆಬಿನಾರ್‌ಗಳನ್ನು ನಡೆಸಿದ್ದಾರೆ.




ಸಾಧಿಸುವ ಛಲ ಬೇಕು                                                                                                          


(ಗಲ್ಪ್ ಕನ್ನಡಿಗ) "ಸಾಧಿಸುವ ಛಲ ಹಂಬಲ ತುಡಿತ ಒಂದಿದ್ದರೆ ಎಂತಹ ಕಠಿಣ ಪರಿಸ್ಥಿತಿ ಬಂದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ನಾನೇ ಉದಾಹರಣೆ. ಈ ಪಯಣದಲ್ಲಿ ನನ್ನ ಒಟ್ಟಿಗೆ ನಿಂತ ನನ್ನ ಕುಟುಂಬಸ್ಥರ ಅಗಾಧವಾಗಿದ್ದು, ನನ್ನ ಕಾಲೇಜಿನ ಆಡಳಿತ ಮಂಡಳಿಯೂ ಪ್ರತಿಯೊಂದು ಹಂತದಲ್ಲಿ ನನಗೆ ಸಹಕಾರ ನೀಡಿದೆ. ಈ ಯಶಸ್ಸಿಗೆ ಕಾರಣಕರ್ತರಾದ ನನ್ನ ಆತ್ಮೀಯರು ಬಂಧುಗಳು ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳ ಬಯಸುತ್ತೇನೆ". ಎಂದು ಧೀರೇಂದ್ರ ಜೈನ್ ಹೇಳುತ್ತಾರೆ


(ಗಲ್ಪ್ ಕನ್ನಡಿಗ) ಕಳೆದ 35 ವರ್ಷಗಳಿಂದ ಮೂಡಬಿದಿರೆಯಲ್ಲಿ ಕಾರ್ಯಾಚರಿಸುತ್ತಿರುವ ತ್ರಿಭುವನ್ ಜೆಸಿಐ ಘಟಕದಿಂದ ರಾಷ್ಟ್ರೀಯ ತರಬೇತುದಾರನಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಇವರಾಗಿದ್ದು, 2014 ರಲ್ಲಿ ಝೋನ್ ತರಬೇತುದಾರರಾಗಿ ಆಗಿ ಹಾಗೂ 2015ರಲ್ಲಿ ತ್ರಿಭುವನ್ ಜೆಸಿಐ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಇವರ ಕಠಿಣ ಪರಿಶ್ರಮದ ಫಲವಾಗಿರಲಿ ರಾಷ್ಟ್ರೀಯ ತರಬೇತಿ ಪರೀಕ್ಷೆಯನ್ನು ಉತ್ತೀರ್ಣವಾಗುವ ಮೂಲಕ ಘಟಕದ ಕೀರ್ತಿಯನ್ನು ಮತ್ತುಷ್ಟು ಹೆಚ್ಚಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99