ಮಂಗಳೂರಿನಲ್ಲಿ ಗುಜರಿ ಅಂಗಡಿಗೆ ಬೆಂಕಿ
Thursday, July 30, 2020
(ಗಲ್ಪ್ ಕನ್ನಡಿಗ) ಮಂಗಳೂರು: ಮಂಗಳೂರಿನಲ್ಲಿ ಗುಜರಿ ಅಂಗಡಿಗೆ ಇಂದು ಮುಂಜಾನೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
(ಗಲ್ಪ್ ಕನ್ನಡಿಗ) ಮಂಗಳೂರಿನ ಬಂದರುವಿನ ಬಿ ಬಿ ಅಲಾಬಿ ರಸ್ತೆಯಲ್ಲಿರುವ ಗುಜರಿ ಅಂಗಡಿಗೆ ಮುಂಜಾನೆ ಐದು ಗಂಟೆಯ ಸುಮಾರಿಗೆ ಬೆಂಕಿ ಬಿದ್ದಿದೆ. ಗುಜರಿ ಅಂಗಡಿಯೊಳಗಿದ್ದ ಬ್ಯಾಟರಿಯಿಂದ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ.
(ಗಲ್ಪ್ ಕನ್ನಡಿಗ) ಬೆಂಕಿಯ ಕೆನ್ನಾಲಗೆಗೆ ಗುಜರಿ ಅಂಗಡಿಯೊಳಗೆ ಇದ್ದ ಗುಜರಿ ಸಾಮಾಗ್ರಿಗಳು, ಪೀಠೋಪಕರಣಗಳು ಭಸ್ಮವಾಗಿದೆ. ಮಂಗಳೂರಿನ ಪಾಂಡೇಶ್ವರದಲ್ಲಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.