ನಿಮ್ಮ "ಕಾಲ" ಗುಣಕ್ಕೆ 2 ಜಿಲ್ಲಾಧಿಕಾರಿಗಳು ಅಪಮಾನಕ್ಕೀಡಾಗಿ ವಾಪಾಸ್; ಕೋಟಗೆ ಕಾಲೆಳೆದ ಖಾದರ್(ಗಲ್ಫ್ ಕನ್ನಡಿಗ)ಮಂಗಳೂರು; ಡಿಸಿ ಸಿಂಧೂ ರೂಪೇಶ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮತ್ತು ಹಾಲಿ ಸಚಿವರ ನಡುವೆ ಟ್ವೀಟ್ ವಾರ್ ಮುಂದುವರಿದಿದೆ.


(ಗಲ್ಫ್ ಕನ್ನಡಿಗ) ಸಿಂಧೂ ರೂಪೇಶ್ ವರ್ಗಾವಣೆ ವಿರೋಧಿಸಿ ಖಾದರ್ ನೀಡಿದ್ದ ಹೇಳಿಕೆಗೆ ಅಧಿಕಾರಿಗಳಿಗೆ ಹಲ್ಲೆ ನಡೆಸಲು, ಗೂಂಡಗಿರಿ ನಡೆಸಲು ಇದು ಖಾದರ್ ಕಾಲವಲ್ಲ ಎಂಬ ಹೇಳಿಕೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತೆ ಟ್ವೀಟ್ ನಲ್ಲಿ ಖಾದರ್ ಕಾಲೆಳೆದಿದ್ದಾರೆ.

(ಗಲ್ಫ್ ಕನ್ನಡಿಗ) ಯು ಟಿ ಖಾದರ್ ಮಾಡಿದ ಟ್ವೀಟ್ ಹೀಗಿದೆ...

(ಗಲ್ಫ್ ಕನ್ನಡಿಗ) ನಿಮ್ಮ "ಕಾಲ"ಗುಣ, ಬಂದ ಒಂದೇ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಅಪಮಾನಕ್ಕೀಡಾಗಿ ವಾಪಸ್ ಹೋಗಿದ್ದಾರೆ. ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ. ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಮಾತ್ರ  ಬೇರೆಯವರ ಕೈಯಲ್ಲಿದೆಯಲ್ಲಾ.