ಡಿಸಿ ವರ್ಗಾವಣೆಗೆ ಖಾದರ್ ಸಿಡಿಮಿಡಿ: ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡೊ ಬದಲು ಜಿಲ್ಲಾಧಿಕಾರಿಗೆ ಶಿಕ್ಷೆ- ಟ್ವೀಟ್ ನಲ್ಲಿ ಆಕ್ರೋಶ
(ಗಲ್ಪ್ ಕನ್ನಡಿಗ) ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರ ವರ್ಗಾವಣೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳನ್ನು ನಿನ್ನೆ ಸರಕರ ವರ್ಗಾಯಿಸಿರುವುದನ್ನು ಮಾಜಿ ಸಚಿವ ಯು ಟಿ ಖಾದರ್ ಟ್ವೀಟ್ ಮೂಲಕ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ) ಗೋ ಸಾಗಾಟದ ವಿಚಾರದಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಕಾನೂನು ಕೈಗೆತ್ತಿಕೊಂಡರೆ ಕ್ರಮ ಎಂಬ ಹೇಳಿಕೆಯ ನಂತರ ಅವರಿಗೆ ವಾಟ್ಸಪ್ ನಲ್ಲಿ ಜೀವಬೆದರಿಕೆಯೊಡ್ಡುವ ಘಟನೆ ನಡೆದಿತ್ತು. ಇದಾದ ನಂತರ ಜಿಲ್ಲಾಧಿಕಾರಿಗಳ ವರ್ಗಾವಣೆಯನ್ನು ಸರಕಾರ ಮಾಡಿತ್ತು.
ಇದನ್ನು ಓದಿ- ಗೋ ಸಾಗಾಟ ವಿವಾದದ ಬೆನ್ನಿಗೆ ದ.ಕ ಜಿಲ್ಲಾಧಿಕಾರಿ ವರ್ಗಾವಣೆ: ವರ್ಗಾವಣೆಗೆ ಇದೇ ಕಾರಣವಾಯ್ತ?
(ಗಲ್ಪ್ ಕನ್ನಡಿಗ)ಸರಕಾರದ ಈ ಕ್ರಮಕ್ಕೆ ಮಾಜಿ ಸಚಿವ ಯು ಟಿ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡೊ ಬದಲು ಜಿಲ್ಲಾಧಿಕಾರಿಗೆ ಶಿಕ್ಷೆ ನೀಡಿದ ಎಂದು ಹೇಳಿದ್ದಾರೆ. ಅವರು ಮಾಡಿದ ಟ್ವೀಟ್ ಈ ರೀತಿಯಾಗಿದೆ.
(ಗಲ್ಪ್ ಕನ್ನಡಿಗ)ಕಾನೂನು ಕೈಗೆತ್ತಿಕೊಂಡರೆ,ನೈತಿಕ ಪೋಲಿಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದರು.ಸರ್ಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ.
ಉತ್ತರಿಸು ಸರ್ಕಾರ #ನ್ಯಾಯ ಎಲ್ಲಿದೆ ? ?
(ಗಲ್ಪ್ ಕನ್ನಡಿಗ) ಈ ರೀತಿ ಅವರು ಟ್ವೀಟ್ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಆಕ್ರೋಶ ವ್ಯಕ್ತಡಪಸಿದ್ದಾರೆ.
(ಗಲ್ಪ್ ಕನ್ನಡಿಗ)