-->
ads hereindex.jpg
ಕೊರೊನಾಗಿಂತ ಬಿಜೆಪಿಯ ಭ್ರಷ್ಟಾಚಾರ ಭೀಕರ; ಡಿ ಕೆ ಶಿವಕುಮಾರ್

ಕೊರೊನಾಗಿಂತ ಬಿಜೆಪಿಯ ಭ್ರಷ್ಟಾಚಾರ ಭೀಕರ; ಡಿ ಕೆ ಶಿವಕುಮಾರ್(ಗಲ್ಫ್ ಕನ್ನಡಿಗ) ಮಂಗಳೂರು; ಕೊರೊನಾ ಗಿಂತ ಬಿಜೆಪಿಯ ಭೃಷ್ಟಾಚಾರ ಭೀಕರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.


(ಗಲ್ಫ್ ಕನ್ನಡಿಗ) ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
 ರಾಜ್ಯದ ಜನತೆಗೆ  ಬಿಜೆಪಿ ಸರ್ಕಾರ ದೊಡ್ಡ ಶಾಪ.ಸರ್ಕಾರದ ಭಷ್ಟಾಚಾರದ ಬಗ್ಗೆ ಕೋರ್ಟ್ ಮೂಲಕ ತನಿಖೆಯಾಗಬೇಕು.ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು ಎಂದರು.


(ಗಲ್ಫ್ ಕನ್ನಡಿಗ)ನನ್ನ ಮೇಲೆ ಇಡಿ,ಸಿಬಿಐ ಪ್ರಯೋಗ ಮಾಡಿದ್ರಿ.ನನ್ನನ್ನು ಗಲ್ಲು ಹಾಕಲು ಹೊರಟಿದ್ದೀರಿ. ಸರ್ಕಾರ ದಿಂದ ಲೀಗಲ್ ನೋಟಿಸ್ ಗೆ ಉತ್ತರ ಕೊಡುತ್ತೇವೆ .ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆ ಇದೆ ಎಂದು ತಿಳಿಸಿದರು.

(ಗಲ್ಫ್ ಕನ್ನಡಿಗ) ಕೋವಿಡ್ ವಿಚಾರದಲ್ಲಿ ಪ್ರತಿ ಪಕ್ಷವಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ.ಕೊರೊನಾ ವಿಚಾರದಲ್ಲಿ ಸರ್ಕಾರದ ಭೃಷ್ಟಾಚಾರಕ್ಕೆ ನಾವು ಬೆಂಬಲ ನಿಡೋದಿಲ್ಲ. 4ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ 2 ಸಾವಿರ ಕೋಟಿ ರೂಪಾಯಿ ಯನ್ನು ಸರ್ಕಾರ ಲೂಟಿ ಮಾಡಿದೆ. ಕೊರೊನಾ ದಲ್ಲಿ ಭೃಷ್ಟಾಚಾರ-ಬಿಜೆಪಿ ಸರ್ಕಾರದ ಸಂಸ್ಕಾರವಾಗಿದೆ.ಪಬ್ಲಿಕ್ ಅಕೌಂಟ್ಸ್ ಕಮೀಟಿ ಮೀಟಿಂಗ್ ಗೆ ಅವಕಾಶ ಮಾಡಿಕೊಡಿ.ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಲಿ.ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದೆ.ಸರ್ಕಾರಕ್ಕೆ  ಬೇಕಾದ ಕೆಲಸ ಮಾಡುತ್ತಿದ್ದಾರೆ.ಬೇಕಾದ ಬಿಲ್ ಗಳನ್ನು ಕೊಡುತ್ತಿದ್ದಾರೆ.ನಾಲ್ಕು ಲಕ್ಷ ದ ವೆಂಟಿಲೇಟರ್ ಕಿಟ್ ನ್ನು 18 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾರೆ.1050 ರೂಪಾಯಿಗೆ ಥರ್ಮಲ್ ಸ್ಕ್ಯಾನ್ ನ್ನು ಖರೀದಿ ಮಾಡಿದ್ದೇನೆ .100ರೂಪಾಯಿಗೆ ಸ್ಯಾನಿಟೈಸರ್ ನ್ನು ಖರೀದಿ ಮಾಡಿದ್ದೇನೆ.ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ.ನೀವು ನನ್ನ ಮೇಲೆ ಕೇಸ್ ಮಾಡಿ.ಮಾನನಷ್ಟ ಮೊಕದ್ದಮೆ ಹಾಕಿ.ನನ್ನನ್ನು ಬೇಕಾದರೆ ಅರೆಸ್ಟ್ ಮಾಡಿ.ಹಗರಣದ ಬಗ್ಗೆ ತನಿಖೆ ಮಾಡಲು ಅವಕಾಶ ಕೊಡಿ ಎಂದು ಹೇಳಿದರು.

Ads on article

Advertise in articles 1

advertising articles 2