Shocking News ಲ್ಯಾಬ್ ಟೆಕ್ನಿಷಿಯನ್ ಕಾಮದಾಟ; ಈತ ಕೋವಿಡ್ ಟೆಸ್ಟ್ ಗೆ 23 ಹರೆಯದ ಯುವತಿಯ ಗಂಟಲು ದ್ರವದ ಬದಲಿಗೆ ಮಾಡಿದ್ದು....(ಗಲ್ಫ್ ಕನ್ನಡಿಗ)  ಮುಂಬಯಿ;  ಕೊರೊನಾ ಟೆಸ್ಟ್ ಮಾಡಲು ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ತೆಗೆದು ಪರೀಕ್ಷೆ ಮಾಡುವುದು ಕ್ರಮ. ಆದರೆ ಮುಂಬಯಿಯಲ್ಲಿ ಓರ್ವ ಕಾಮುಕ ಲ್ಯಾಬ್ ಟೆಕ್ನಿಷಿಯನ್ ಯುವತಿಯ ಗುಪ್ತಾಂಗ ದ್ರವ ಸಂಗ್ರಹ ಮಾಡಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.


(ಗಲ್ಫ್ ಕನ್ನಡಿಗ)ಮಹಾರಾಷ್ಟ್ರ ರಾಜ್ಯದ ಆಸ್ಪತ್ರೆಯೊಂದರ 30 ವರ್ಷದ ಲ್ಯಾಬ್ ಟೆಕ್ನಿಷಿಯನ್ ಈ ನೀಚ ಕೆಲಸ ಮಾಡಿದವನು. 
23 ವರ್ಷದ ಯುವತಿ  ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು  , ಆಕೆಯೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆ  ಕೊರೊನಾ ಟೆಸ್ಟ್ ಗೆ ತೆರಳಿದ್ದಳು.  ಆಕೆ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಗೆಂದು ಬಂದ ಸಂದರ್ಭದಲ್ಲಿ ಈತ ಗಂಟಲು ದ್ರವ ತೆಗೆದುಕೊಂಡು ಕೋವಿಡ್ 19 ಪರೀಕ್ಷೆಗೆ  ಮಾಡಿದ್ದಾನೆ.


(ಗಲ್ಫ್ ಕನ್ನಡಿಗ)ಕೋವಿಡ್ ಪರೀಕ್ಷೆ ಮಾಡಿದ ಬಳಿಕ  ಅಲ್ಪೇಶ್ ದೇಶ್ ಮುಖ್ ಎಂದು ಪರಿಚಯಿಸಿಕೊಂಡ ಲ್ಯಾಬ್ ಟೆಕ್ನಿಷಿಯನ್ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ. ಈಗ ಇದರ ನಿಖರ ಫಲಿತಾಂಶಕ್ಕೆಂದು ಗುಪ್ತಾಂಗ ದ್ರವ ಪರೀಕ್ಷೆ ಮಾಡಬೇಕೆಂದು ತಿಳಿಸಿದ್ದಾನೆ.
(ಗಲ್ಫ್ ಕನ್ನಡಿಗ)ಅದರಂತೆ ಯುವತಿ ಎರಡನೇ ಟೆಸ್ಟ್ ಗಾಗಿ  ಲ್ಯಾಬ್ ಗೆ ಬಂದಾಗ ಆಕೆಯ ಗುಪ್ತಾಂಗದ ದ್ರವ ತೆಗೆದು ಪರೀಕ್ಷಿಸಿದಂತೆ ಮಾಡಿ  ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾನೆ.

(ಗಲ್ಫ್ ಕನ್ನಡಿಗ) ಈ ಬಗ್ಗೆ ಕೊನೆಗೆ ಆಕೆಗೆ ಸಂಶಯ ಬಂದು ಈ ವಿಚಾರವನ್ನು ಅಣ್ಣನಲ್ಲಿ ತಿಳಿಸಿದ್ದಾಳೆ. ಆಕೆಯ ಅಣ್ಣ ಡಾಕ್ಟರ್ ಗಳ ಬಳಿ ವಿಚಾರಿಸಿದಾಗ ಗುಪ್ತಾಂಗ ದ್ರವ ತೆಗೆದು ಪರೀಕ್ಷೆ ಮಾಡುವ ಕ್ರಮ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಆಕೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಆತನನ್ನು ಬಂಧಿಸಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.