ದಕ್ಷಿಣ ಕನ್ನಡದಲ್ಲಿ ಕೊರೊನಾಘಾತ: ಇಂದು ಒಂದೇ ದಿನ 8 ಮಂದಿ ಸಾವು


(ಗಲ್ಪ್ ಕ್ನನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದಿಂದ ಇಂದು ಒಂದೇ ದಿನ ಎಂಟು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಮೃತರೆಲ್ಲ ವಿವಿಧ ರೋಗದಿಂದ ಬಳಲುತ್ತಿದ್ದವರು. ಮೃತರಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದು, ಎಲ್ಲರೂ 40ವರ್ಷ ಮೇಲ್ಪಟ್ಟವರಾಗಿದ್ದಾರೆ. ಮೃತರ ಪೈಕಿ ಆರು ಮಂದಿ ಜಿಲ್ಲೆಯವರಾದರೆ, ಇಬ್ಬರು ಶಿವಮೊಗ್ಗ ಮೂಲದವರಾಗಿದ್ದಾರೆ(ಗಲ್ಪ್ ಕ್ನನಡಿಗ) ಇಂದು ಮೃತಪಟ್ಟ ಎಂಟು ಮಂದಿಯ ವಿವರ ಈ ಕೆಳಗಿನಂತಿದೆ.

1. ಮಂಗಳೂರಿನ 44 ವರ್ಷದ ಪುರುಷನಿಗೆ ತೀವ್ರ ಉಸಿರಾಟ ತೊಂದರೆ, ಬಹು ಅಂಗಾಂಗ ವೈಫಲ್ಯ, ಅಧಿಕ ರಕ್ತದೊತ್ತಡದ ಕಾಯಿಲೆಗಳಿಂದ ಬಳಲುತ್ತಿದ್ದರು.

2.ಮಂಗಳೂರಿನ 75 ವರ್ಷದ ಮಹಿಳೆಯು ಉಸಿರಾಟ ತೊಂದರೆ, ಸೆಪ್ಟಿಕ್ ಶಾಕ್‌ನೊಂದಿಗೆ ಬಹು ಅಂಗಾಂಗ ವೈಫಲ್ಯ, ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ,


3.ಪುತ್ತೂರು ತಾಲೂಕಿನ 61 ವರ್ಷದ ಮಹಿಳೆಯು ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.


4. ಬಂಟ್ವಾಳ ತಾಲೂಕಿನ 42 ವರ್ಷದ ಪುರುಷನು ಉಸಿರಾಟ ತೊಂದರೆ, ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದರು.


5.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ 67 ವರ್ಷದ ಪುರುಷನು ನ್ಯುಮೋನಿಯ, ಶ್ವಾಸಕೋಶ ಕಾಯಿಲೆ ಯಿಂದ ಬಳಲುತ್ತಿದ್ದರೆ,


6. ಶಿವಮೊಗ್ಗ ಜಿಲ್ಲೆಯ ಭದ್ರಾವತಿ 67 ವರ್ಷದ ಪುರುಷ, ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.


7..56 ವರ್ಷದ ವ್ಯಕ್ತಿಗೆ ಮೂತ್ರನಾಳದ ಸೋಂಕು, ಬಹು ಅಂಗಾಂಗ ವೈಫಲ್ಯ, ಸೆಪ್ಟಿಕ್ ಶಾಕ್, ದೀರ್ಘಕಾಲದ ಮಧುಮೇಹ, ಹೈಪೊಥೈರಾಯ್ಡಿಡ್, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

8. ಮಂಗಳೂರಿನ 65 ವರ್ಷದ ಮಹಿಳೆಯು ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು.


(ಗಲ್ಪ್ ಕ್ನನಡಿಗ)