ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತರಾಗಿ ಶಶಿ ನೇಗಿ ಅಧಿಕಾರ ಸ್ವೀಕಾರ
Friday, July 24, 2020
(Gulfkanadiga.com) ಮಂಗಳೂರು: ಭಾರತ ಸರಕಾರದ ಮುಖ್ಯ ಕಾರ್ಮಿಕ ಆಯುಕ್ತರಾಗಿ ಶಶಿ ನೇಗಿ (1987ರ ಸಿ.ಎಲ್.ಎಸ್. ಬ್ಯಾಚ್‍ನ) ಜುಲೈ 16 ರಂದು ಅಧಿಕಾರ ಸ್ವೀಕರಿಸಿದರು.
(Gulfkanadiga.com) ಇವರು ಭಾರತದ ಮೊದಲ ಮಹಿಳಾ ಮುಖ್ಯ ಕಾರ್ಮಿಕ ಆಯುಕ್ತರಾಗಿರುತ್ತಾರೆ. ಹಾಗೂ ಈ ಹುದ್ದೆಯನ್ನು ಅಲಂಕರಿಸುವ ಮೊದಲು ಕಾರ್ಮಿಕ ಆಯುಕ್ತರಾಗಿ, ಅಪರ ಮುಖ್ಯ ಕಾರ್ಮಿಕ ಆಯುಕ್ತರಾಗಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಮಿಕ ಕಲ್ಯಾಣ ಆಯುಕ್ತರಾಗಿ ಹಾಗೂ ಡೆಪ್ಯುಟಿ ಡೈರೆಕ್ಟರ್ ಜನರಲ್ (ಕಾರ್ಮಿಕ ಕಲ್ಯಾಣ) ಆಗಿ ಸೇವೆ ಸಲ್ಲಿಸಿದ್ದಾರೆ.