-->
ads hereindex.jpg
ಮೈಸೂರು ಮೃಗಾಲಯದ ಗಂಡು ಹುಲಿ “ಬ್ರಹ್ಮ” ಮರಣ

ಮೈಸೂರು ಮೃಗಾಲಯದ ಗಂಡು ಹುಲಿ “ಬ್ರಹ್ಮ” ಮರಣ


(ಗಲ್ಪ್ ಕನ್ನಡಿಗ) ಮೈಸೂರು: ಮೈಸೂರು ಮೃಗಾಲಯದಲ್ಲಿದ್ದ ಗಂಡು ಹುಲಿ ಇಂದು ಸಾವನ್ನಪ್ಪಿದೆ. 20 ವರ್ಷ ವಯಸ್ಸಿನ ಬ್ರಹ್ಮ ಎಂಬ ಹೆಸರಿನ ಗಂಡು ಹುಲಿಯು ಇಂದು ಮರಣ ಹೊಂದಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ್ ಕುಲಕರ್ಣಿ ತಿಳಿಸಿದ್ದಾರೆ.


(ಗಲ್ಪ್ ಕನ್ನಡಿಗ)2008ರ ಮಾರ್ಚ್ 18 ರಂದು ಬ್ರಹ್ಮ ಹುಲಿಯನ್ನು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತೆರಳು ಗ್ರಾಮದಿಂದ ಸೆರೆ ಹಿಡಿದು ಮೃಗಾಲಯದಲ್ಲಿ ರಕ್ಷಿಶೀ, ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಬ್ರಹ್ಮ ಹುಲಿಯನ್ನು ದಿವಂಗತ ಯೋಗ ಗುರು ಬಿ.ಕೆ.ಎಸ್ ಐಯ್ಯಂಗಾರ್ ಅವರು ಹುಲಿಯಾ ಜೀವಮಾನ ಪರ್ಯಂತರಕ್ಕೂ ದತ್ತು ಪಡೆದಿದ್ದರು.

(ಗಲ್ಪ್ ಕನ್ನಡಿಗ)ಬ್ರಹ್ಮ ಹುಲಿಯು ವೃದ್ದಾಪ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಇಂದು ಮಧ್ಯಾಹ್ನ ಮೂರು ಗಂಟೆಯಲ್ಲಿ ಸಾವನ್ನಪ್ಪಿದೆ. ಮೃಗಾಲಯದಲ್ಲಿ ಈಗ 10 ಗಂಡು ಹುಲಿ ಹಾಗೂ 6 ಹೆಣ್ಣು ಹುಲಿಗಳಿಗೆ ಪಾಲನೆ ಮಾಡಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜೀತ್ ಕುಲಕರ್ಣಿ ಅವರು ತಿಳಿಸಿದ್ದಾರೆ


Ads on article

Advertise in articles 1

advertising articles 2