-->

ಜೈನಕಾಶಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ 2777 ನೇ ಮೋಕ್ಷ ಕಲ್ಯಾಣ ಶ್ರಾವಣ ಸಪ್ತಮ ದಿನಾಚರಣೆ

ಜೈನಕಾಶಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ 2777 ನೇ ಮೋಕ್ಷ ಕಲ್ಯಾಣ ಶ್ರಾವಣ ಸಪ್ತಮ ದಿನಾಚರಣೆ (ಗಲ್ಫ್ ಕನ್ನಡಿಗ) ಮಂಗಳೂರು: ಮೂಡುಬಿದಿರೆ ಜೈನ ಕಾಶಿ ಯ18  ಬಸದಿ ಗಳಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಸಾನ್ನಿಧ್ಯ  ಮಾರ್ಗದರ್ಶನ ದಲ್ಲಿ  ಭಗವಾನ್ ಪಾರ್ಶ್ವನಾಥ ಸ್ವಾಮಿ 2777 ನೇಯ  ಮೋಕ್ಷ ಕಲ್ಯಾಣ ಶ್ರಾವಣ ಸಪ್ತಮಿ ಯ ದಿನ ವಾದ ಇಂದು 27.7.2020 ರಂದು ಮೂಲ ಸ್ವಾಮಿ ಇರುವ ಗುರು ಬಸದಿ ಹಾಗೂ ಶ್ರೀ ಜೈನ ಮಠ ದ ಬಸದಿ  ಗಳಲ್ಲಿ ಶ್ರೀ ಜಿನೇಶ್ವರ ಅಭಿಷೇಕ  ನಿರ್ವಾಣ ಕಲ್ಯಾಣ ಮಹಾ ಅರ್ಗ್ಯ ಸಹಿತ ವಿಶೇಷ ಪೂಜೆ,  ನೆರವೇರಿಸಲಾಯಿತು .

(ಗಲ್ಫ್ ಕನ್ನಡಿಗ)ಭಗವಾನ್ ಪಾರ್ಶ್ವನಾಥರು ಕಾಶಿ,  ವಾರಾಣಸಿ ಯ  ರಾಜಕುಮಾರ ರಾಗಿ ಕ್ರಿ ಪೂ 877 ರಲ್ಲಿ  ಜನಿಸಿ ದೇವರ ಹೆಸರಲ್ಲಿ ಯಜ್ಞ ಯಾಗ ಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ನಿಷೇದ ಮಾಡಿಸಿದರು ಚಾತುರ್ಯಮ ವ್ರತ ಗಳಾದ ಸತ್ಯ ಅಹಿಂಸೆ ಅಚೌರ್ಯ ಅಪರಿಗ್ರಹ ಒಳಗೊಂಡ ಸದಾಚಾರ ದಿಂದ ಜೀವನ ದಲ್ಲಿ ಸುಖ ಪಡೆದು ಸರ್ವ ಜೀವಿಗಳಿಗೆ ಒಳಿತನ್ನು ಬಯಸುವವರ ಜೀವನ ಪಾವನ ಎಂದು ನುಡಿ ದವರು ಕಠಿಣ ಉಪಸರ್ಗ ಗಳನ್ನು ಸಂಯಮ ದಿಂದ ಎದುರಿಸಿ 30 ನೆ ಯ ವ ಯಸ್ಸಿ ಗೆ ನಿರ್ವಾಣ  ದೀಕ್ಷೆ ಸ್ವೀಕರಿಸಿ70 ವರ್ಷ ಧರ್ಮ ಪ್ರಭಾವನೆ ಮಾಡಿದ್ದರು  ಉತ್ತರ ಭಾರತ ದಕ್ಷಿಣ ಭಾರತ ದೆಲ್ಲೆಡೆ  ಧರ್ಮ ಪ್ರಭಾವನೆ  ಮಾಡಿ ದವರು ಎಂದು ಆಶೀರ್ವಚನ ದಲ್ಲಿ  ಮೂಡುಬಿದಿರೆ ಶ್ರೀ ಗಳವರು ತಿಳಿಸಿ ಸರ್ವರೊ ಜೀವನದಲ್ಲಿ ಸಂಕಷ್ಟ ಗಳು ಬಂದಾಗ ಅಧೀರ ರಾಗದೆ ತಾಳ್ಮೆ ಸಂಯಮ ದಿಂದ ಇದ್ದು ಇದ್ದುದರಲ್ಲೆ ತೃಪ್ತಿ ಪಟ್ಟು ಸರಳ ಸುಂದರ  ಜೀವನ ವನ್ನು ನಡೆಸಿ   ಸಂತೋಷ ಪಡೆಯಲು ಪಾರ್ಶ್ವನಾಥ ಸ್ವಾಮಿ ಸ್ಫೂರ್ತಿ ಎಂದು ನುಡಿದರು ಪೂಜೆ ಗೆ ಬಂದ ಸೀಮಿತ ಭಕ್ತಾದಿಗಳು   ಅಂತರ ಕಾಯ್ದು ಭಾಗವಹಿಸಿ ದರು ಪೂಜಾ ಸೇವಾ ದಾತಾರ ರಾದ  ಮೂಡುಬಿದಿರೆ  ಜೈನ್ ಮಿಲನ್ ವೀರ ವೀರಾಂಗನೆ ಯರು   ಶ್ರಾವಕ ಶ್ರಾವಿಕೆಯರು   ಭಕ್ತಾದಿಗಳು  ಬಸದಿ ಗಳ ವಿಶೇಷ ಕಾರ್ಯಕ್ರಮ ದಲ್ಲಿ  ಶ್ರೀ ಗಳವರೊಂದಿಗೆ ಭಾಗವಹಿಸಿ 27.7.2020 ರ ಸೋಮವಾರ ಬೆಳಿಗ್ಗೆ 7.35ಕ್ಕೆ ಗುರು ಬಸದಿ ಯಲ್ಲಿ  ಷೋಡಶೋಪಚಾರ ಪೂಜೆ ಜಲ, ಎಳೆ ನೀರು, ಹಾಲು ,  ಶ್ರೀ ಗಂದ, ಚಂದನ ಗಳಿಂದ ಚಂಡೋಗ್ರ  1008 ಭಗವಾನ್ ಶ್ರೀ ಶ್ರೀ ಶ್ರೀ ಪಾರ್ಶ್ವನಾಥ ಸ್ವಾಮಿ ಗೆ ಪಂಚಾಮೃತ ಅಭಿಷೇಕ ಮಾಡಿ ಮಹಾ ಶಾಂತಿ ದಾರೆ ಯೆರೆ ದು ಸರ್ವರಲ್ಲಿ ಜಿನೇಶ್ವ ರ ರ ಶ್ರೇಷ್ಠ ಗುಣ ಗಳ ಬಗ್ಗೆ ತಿಳಿಯುವ ಶಕ್ತಿ ಬರಲಿ ಸರ್ವ  ಜೀವ ಗಳ ಬಗ್ಗೆ ದಯೆ ತೋರಿಸೋಣ  ಲೋಕದಲ್ಲಿ, ರೋಗ ರುಜಿನ ಗಳಿಲ್ಲದೆ ಸುಭಿಕ್ಷೆ ನೆಲೆ ಯಾಗಲಿ ಎಂದು ಪ್ರಾರ್ಥಿಸ ಲಾಯಿತು ಶ್ರೀ ಜೈನ ಮಠ ದಲ್ಲಿ ಶ್ರೀ ಗಳವರು 2777 ನಿರ್ವಾಣ    ಪೂಜೆ  ಅಭಿಷೇಕ ದ ಲ್ಲಿ ಭಾಗವಹಿಸಿ ದ ಪೂಜೆ ಗೆ ಬಂದ  ಸರ್ವರಿಗೂ ಹರಸಿ ಆಶೀರ್ವಾದಿ ಸಿದರು.

 (ಗಲ್ಫ್ ಕನ್ನಡಿಗ) ಶ್ರೀ ಸುದೇಶ್ ಕುಮಾರ್ ಪಟ್ಣ ಶೆಟ್ಟಿ, ದಿನೇಶ್ ಕುಮಾರ್,ಯಂ ಬಾಹುಬಲಿ ಪ್ರಸಾದ್,  ವಿಜಯ್ ಕುಮಾರ್, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಮಂಜುಳಾ ಅಭಯ ಚಂದ್ರ, ಸಂಧ್ಯಾ,   ಯತಿ ರಾಜ್  ಶೆಟ್ಟಿ, ವೀರೇಂದ್ರ ಕುಮಾರ್, ಶಾಂತ  ಕುಮಾರ್ , ಸುಧಾಕರ್ ಶ್ರೀ ಮಠ ದಲ್ಲಿ  ಅಭಿಷೇಕ ಮಾಡಿದ  ಪಟ್ಟದ ಪುರೋಹಿತ ಪಾರ್ಶ್ವನಾಥ   ಇಂದ್ರ  ಮೊದಲಾದ ವರು ಉಪಸ್ಥಿತರಿದ್ದರು.ಭಕ್ತಾದಿ ಗಳಿಗೆ ಫೇಸ್ ಬುಕ್ ಲೈವ್ ಮೂಲಕ ಅಭಿಷೇಕ ನೋಡುವ ವ್ಯೆವಸ್ಥೆ ಮಾಡ ಲಾಗಿತ್ತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99