-->

ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಶಿರೂರು ಶ್ರೀಪಾದರ ಆರಾಧನೆ.

ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಶಿರೂರು ಶ್ರೀಪಾದರ ಆರಾಧನೆ.

 (ಗಲ್ಫ್ ಕನ್ನಡಿಗ) ನಿರಂತರ 48 ವರ್ಷಗಳ ಕಾಲ ಉಡುಪಿ ಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ,ಮೂರು ಪರ್ಯಾಯಗಳನ್ನು ಯಶಸ್ವಿಯಾಗಿ ನಡೆಸಿದ ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 2ನೇ ವರ್ಷದ ಆರಾಧನೆಯು ಪುನರೂರು ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು.

(ಗಲ್ಫ್ ಕನ್ನಡಿಗ)ಶಿರೂರು ಶ್ರೀಪಾದರ ಪೂರ್ವಾಶ್ರಮದ 
ಮೂಲ ದೇವತಾ ಸನ್ನಿಧಾನವಾದ ಪುನರೂರು ಕ್ಷೇತ್ರದಲ್ಲಿ ಕುಟುಂಬಿಕರ ಉಪಸ್ಥಿತಿಯಲ್ಲಿ ಶ್ರೀವಿಶ್ವನಾಥ ದೇವರಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ 
ಶ್ರೀಗುರುಮೂರ್ತಿಯವರು ಮಹಾಪೂಜೆ ಸಹಿತ ಏಕಾದಶ ರುದ್ರಾಭಿಷೇಕ, ಹಾಗೂ ವಿದ್ವಾಂಸರಾದ ಕಡಂದಲೆ ಅನಂತ ಕೃಷ್ಣಾಚಾರ್ಯಾರು ಪವಮಾನ ಹೋಮವನ್ನು ವಿಧಿವತ್ತಾಗಿ ನಡೆಸಿಕೊಟ್ಟರು.


(ಗಲ್ಫ್ ಕನ್ನಡಿಗ)ತದನಂತರ ಶ್ರೀ ಶಿರೂರು ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ವಿವಿಧ ತೀರ್ಥಕ್ಷೇತ್ರಗಳ ತೀರ್ಥಗಳಿಂದ ಕಲಶಾಭಿಷೇಕ ನೆರವೇರಿತು.ಶ್ರೀಪಾದರ ಸ್ಮರಣಾರ್ಥವಾಗಿ ಶ್ರೀಕೇಮಾರು ಮಠದ
ಶ್ರೀಈಶವಿಟ್ಟಲದಾಸ ಸ್ವಾಮೀಜಿಯವರು ಕೇಮಾರಿನಲ್ಲಿ ತಮ್ಮ ಪಟ್ಟದ ದೇವರಾದ 
ಶ್ರೀವರದನಾರಾಯಣ ದೇವರಿಗೆ ಹಾಗೂ ಬೃಹತ್ ಶಾಲಗ್ರಾಮ ಸನಿಧಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

(ಗಲ್ಫ್ ಕನ್ನಡಿಗ)ಪುನರೂರು ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು,ಪಟೇಲ ವಾಸುದೇವ ರಾವ್,
ಯುಗಪುರುಷ ಪ್ರಕಟಣಾಲಯದ ಶ್ರೀ ಭುವನಾಭಿರಾಮ ಉಡುಪ,ಶಿಮಂತೂರು ದೇವಾಲಯದ ಪ್ರಧಾನ ಅರ್ಚಕ ಶ್ರೀ ಪುರುಷೋತ್ತಮ ಆಚಾರ್, ಶಿರೂರು ಶ್ರೀಪಾದರ ಪೂರ್ವಾಶ್ರಮದ
ಸಹೋದರರಾದ ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ಲಾತವ್ಯಆಚಾರ್ಯ,
ಪಿ.ವೃಜನಾಥ ಆಚಾರ್ಯ,ಬಂಧುಗಳಾದ ಪ್ರಹ್ಲಾದ ಆಚಾರ್ಯ ಸೊಂಡೂರು, ಅಕ್ಷೋಭ್ಯ ಆಚಾರ್ಯ,
ಅರ್ಜುನ ಆಚಾರ್ಯ,ಹರೀಶ ಜೋಯಿಸ್,ಲಕ್ಷ್ಮೀಶ ಜೋಯಿಸ್,ಡಾ.ವ್ಯಾಸರಾಜ ತಂತ್ರಿ ಹಾಗೂ ಪುನರೂರು ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

(ಗಲ್ಫ್ ಕನ್ನಡಿಗ) ಆರಾಧನಾ ಪ್ರಯುಕ್ತ 
ಬೆಂಗಳೂರಿನಲ್ಲಿರುವ ಶ್ರೀಪಾದರ ಶಿಷ್ಯ ಗುರುರಾಜ ಆಚಾರ್ಯ ಇವರು ಪ್ರಾತಃಕಾಲದಲ್ಲಿ ವಾಯುಸ್ತುತಿ ಪುರಶ್ಚರಣೆ ಹೋಮ ನಡೆಸಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಿಮಂತೂರಿನ ಶ್ರೀಆದಿಜನಾರ್ದನ ದೇವರಿಗೆ ಪವಮಾನ ಕಲಶಾಭಿಷೇಕ ಈ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು.ಶ್ರೀಲಕ್ಷ್ಮೀವರತೀರ್ಥ 
ಶ್ರೀಪಾದರ ಹುಟ್ಟೂರಾದ ಮಡಾಮಕ್ಕಿಯಲ್ಲಿ ವೇದಮೂರ್ತಿ ಶ್ರೀಕೃಷ್ಣ ಮೂರ್ತಿ ಮಂಜರು ಹಾಗೂ ಶ್ರೀಅನಂತ ತಂತ್ರಿ ಮಡಾಮಕ್ಕಿ ಇವರ ನೇತೃತ್ವದಲ್ಲಿ ಗ್ರಾಮ ದೇವರಿಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99