ವಿದೇಶದಿಂದ ಬರುವವರಿಗೆ ಲಾಡ್ಜ್ ಕ್ವಾರಂಟೈನ್- ಹೋಟೆಲ್ ಲಾಭಿಗೆ ಮಣಿಯುತ್ತಿರುವ ದ.ಕ ಜಿಲ್ಲಾಡಳಿತ:-SDPI ಆರೋಪ
Monday, July 27, 2020
(ಗಲ್ಪ್ ಕನ್ನಡಿಗ)ಕೊರೋನಾ ಸೋಂಕಿನಿಂದಾಗಿ ನಮ್ಮ ಜಿಲ್ಲೆ ರಾಜ್ಯ ಸೇರಿದಂತೆ ಇಡೀ ದೇಶವೇ ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವ ಈ ಸಂದರ್ಭದಲ್ಲಿ ಸರ್ಕಾರಗಳು ಒಂದೆಡೆ ಇದನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದರೆ ಇನ್ನೊಂದೆಡೆ ಭ್ರಷ್ಟ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಖಾಸಗಿ ವಲಯಗಳ ಹಣ ಮಾಡುವ ದಂಧೆಗೆ ಬೆಂಗಾವಲಾಗಿ ನಿಂತು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನ ಪಡುತ್ತಿರುವುದು ಖಂಡನೀಯ ಎಂದು sdpi ಆರೋಪಿಸಿದೆ
(ಗಲ್ಪ್ ಕನ್ನಡಿಗ)ಮೊದಲಿಗೆ ಆರೋಗ್ಯ ಅಧಿಕಾರಿಯ ನಿರ್ದೇಶನದಂತೆ ಅಂತರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಇಳಿದು ಹೋಟೆಲ್ ಗೆ ತೆರಳಿದ ಎರಡನೇ ದಿವಸದಂದು ರ‌್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಿ ಅರ್ಧ ಗಂಟೆಯೊಳಗೆ ಸ್ವಾಬ್ ರಿಪೋರ್ಟ್ ಪಡೆದು ವರದಿ ನೆಗೆಟಿವ್ ಆದರೆ ಮನೆಗೆ ತೆರಳಬಹುದು ಹಾಗೂ ಪಾಸಿಟಿವ್ ಬಂದರೆ ಆಸ್ಪತ್ರೆಗೆ ತೆರಳಬೇಕೆಂದು ನಿರ್ದೇಶನ ನೀಡಿತ್ತು.
ಆದರೆ ಇಂದು ತನ್ನ ವರಸೆ ಬದಲಾಯಿಸಿದ ಜಿಲ್ಲಾಡಳಿತ ಅಂತರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿವಸಗಳ ಹೋಟೆಲ್ ಕ್ವಾರಂಟೈನ್ ಮಾಡಲೇ ಬೇಕೆಂಬ ಆದೇಶ ನೀಡಿರುವುದರ ಹಿಂದೆ ಮಂಗಳೂರು ಸಂಸದರ ಮುಖಾಂತರ ಹೋಟೆಲ್ ಮಾಲಿಕರ ಲಾಬಿ ನಡೆದಿರುವ ಸಾದ್ಯತೆ ಎದ್ದು ಕಾಣುತ್ತಿದೆ.
ಇದು ಅಕ್ರಮ ಮತ್ತು ಅನ್ಯಾಯದ ಪರಮಾವದಿಯಾಗಿದೆ.ಇದನ್ನು ಒಪ್ಪಲು ಸಾದ್ಯವಿಲ್ಲ.
ಮಂಗಳೂರು ಸಂಸದರು ಜಿಲ್ಲಾಡಳಿತವನ್ನು ಹೈಜಾಕ್ ಮಾಡುವಂತಹ ಕೆಟ್ಟ ಕೆಲಸಕ್ಕೆ ಇಳಿದಿರುವುದು ಖಂಡನೀಯ.
ಬೇರೆ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ರ‌್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಿ ಅರ್ಧ ಗಂಟೆಯೊಳಗೆ ಅದರ ರಿಪೋರ್ಟ್ ಆಧಾರಿಸಿ ಕಳಿಸಿಕೊಡುವ ವ್ಯವಸ್ಥೆ ಇದೆ.ಅದೇ ಮಾದರಿಯನ್ನು ಜಿಲ್ಲೆಯಲ್ಲಿ ಕೂಡ ಮಾಡಬೇಕು.
ಲಾಕ್ ಡೌನ್ ಮತ್ತು ಕೋವಿಡ್ ನಿಂದಾಗಿ ಜನರು ಸಂಕಷ್ಟದಲ್ಲಿರುವಾಗ ಜನರನ್ನು ಇನ್ನಷ್ಟು ಕಷ್ಷದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುವುದು ಸರಿಯಲ್ಲ.
ಈಗಾಗಲೇ ಸಾಮಾಜಿಕ ಜಾಲಾತಣದಲ್ಲಿ ಹೋಟೆಲ್ ಮತ್ತು ಆಸ್ಪತ್ರೆಗಳ ಕೋವಿಡ್ ದಂಧೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಜನಸಾಮಾನ್ಯರು ಕೂಡ ಜಿಲ್ಲಾಡಳಿತ ಮತ್ತು ಸರ್ಕಾರದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲಾಡಳಿತ ರ‌್ಯಾಪಿಡ್ ಆಂಟಿಜನ್ ಟೆಸ್ಟ್ ನ್ನು ವಿಮಾನ ನಿಲ್ದಾಣದಲ್ಲೆ ನಡೆಸಿದರೆ ಪ್ರಯಾಣಿಕರು ಹೋಟೆಲ್ ಗೆ ತೆರಳಬೇಕಾದ ಪ್ರಮೇಯವೇ ಬರುವುದಿಲ್ಲ.ಲ್ಯಾಂಡ್ ಆದ ಅದೇ ದಿನ ವರದಿಯಾಧರಿಸಿ ಮನೆಗೆ ಅಥವಾ ಆಸ್ಫತ್ರೆಗೆ ತೆರಳುವಂತೆ ಮಾಡಬಹುದು. ಆದ್ದರಿಂದ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು.
ಆದುದರಿಂದ ಹೋಟೆಲ್ ಮಾಲಿಕರ ಲಾಭಿಗೆ ಮಣಿದು ಜಿಲ್ಲಾಡಳಿತ ಏಳು ದಿವಸಗಳ ಹೋಟೆಲ್ ಕ್ವಾರಂಟೈನ್ ಮುಂದುವರಿಸಬಾರದು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.