ದ.ಕ. ಜಿಲ್ಲೆಗೆ ಮತ್ತೆ ಕೊರೊನಾಘಾತ; ಇಂದು ಮತ್ತೆ ಎಂಟು ಮಂದಿ ಸಾವು; ಮೃತರ ಸಂಖ್ಯೆ 123ಕ್ಕೇರಿಕೆ
Sunday, July 26, 2020
(ಗಲ್ಪ್ ಕನ್ನಡಿಗ)ಮಂಗಳೂರು: ದ.ಕ. ಜಿಲ್ಲೆಯ ಜನತೆಗೆ ಇಂದು ಮತ್ತೆ ಕೊರೋನಾ ಆಘಾತನೀಡಿದ್ದು, ಒಂದೇ ದಿನ ಎಂಟು ಮಂದಿ ಕೋವಿಡ್ -19ಗೆ ಮೃತಪಟ್ಟಿದ್ದಾರೆ.
(ಗಲ್ಪ್ ಕನ್ನಡಿಗ) ಇದರೊಂದಿಗೆ ದ.ಕ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಒಟ್ಟು ಸಂಖ್ಯೆ 123ಕ್ಕೆ ಏರಿದೆ.
(ಗಲ್ಪ್ ಕನ್ನಡಿಗ) ಕೊರೋನ ಸೋಂಕಿನಿಂದ ಸಾವಿಗೀಡಾದ ಎಂಟು ಮಂದಿಯಲ್ಲಿ ಎಲ್ಲರೂ 45 ವರ್ಷ ಮೇಲ್ಪಟವರಾಗಿದ್ದಾರೆ.ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಪುತ್ತೂರು ತಾಲೂಕಿನವರು ಮೃತಪಟ್ಟಿದ್ದಾರೆ.
(ಗಲ್ಪ್ ಕನ್ನಡಿಗ) ಇವರಲ್ಲಿ ಏಳು ಮಂದಿ ಪುರುಷರು, ಇಬ್ಬರು ಮಹಿಳೆಯರಾಗಿದ್ದು ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲೇ ಸಾವಿಗೀಡಾಗಿದ್ದಾರೆ.
(ಗಲ್ಪ್ ಕನ್ನಡಿಗ)ಮೃತರ ಪೈಕಿ ಮಂಗಳೂರು ನಿವಾಸಿಗಳಾದ 70 ವರ್ಷದ ಇಬ್ಬರು, 56 ವರ್ಷದ ಇಬ್ಬರು, 45, 55, 71 ವರ್ಷದವರು. ಪುತ್ತೂರು ತಾಲೂಕಿನ 55 ವರ್ಷದ ಪುರುಷ ಕೊರೋನ ಸೋಂಕಿನೊಂದಿಗೆ ಬಲಿಯಾಗಿದ್ದಾರೆ. ಇವೆಲ್ಲರೂ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
(ಗಲ್ಪ್ ಕನ್ನಡಿಗ)