ನೋಕಿಯಾದಿಂದ ಬರಲಿದೆ ಹೊಸ ಸ್ಮಾರ್ಟ್ ಪೋನ್?
Sunday, July 26, 2020
(ಗಲ್ಪ್ ಕನ್ನಡಿಗ) ಬೇಸಿಕ್ ಮೊಬೈಲ್ ಕಾಲದಲ್ಲಿ ಉತ್ತುಂಗದಲ್ಲಿದ್ದದ್ದು ನೋಕಿಯಾ ಕಂಪೆನಿಯ ಮೊಬೈಲ್. ಆದರೆ ಸ್ಮಾರ್ಟ್ ಪೋನ್ ಬಂದಾಗ ನೋಕಿಯಾ ಕಂಪೆನಿಯ ಮೊಬೈಲ್ ಕೇಳುವವರೆ ಇರಲಿಲ್ಲ. ನೋಕಿಯಾ ಜಾಗವನ್ನು ಇತರೆ ಕಂಪೆನಿಗಳು ಆಕ್ರಮಿಸಿಕೊಂಡವು. ಆದರೆ ಕೆಲ ವರ್ಷಗಳ ಬಳಿಕ ನೋಕಿಯಾ ಕಂಪೆನಿ ಮತ್ತೆ ಸ್ಮಾರ್ಟ್ ಪೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತಾದರೂ ಮೊದಲಿನಷ್ಟು ಅದಕ್ಕೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಲಿಲ್ಲ. ಆದರೆ ತನ್ನ ಬ್ರಾಂಡ್ ನೇಮ್ ಗೆ ತಕ್ಕಂತೆ ಉತ್ತಮ ಸ್ಮಾರ್ಟ್ ಪೋನ್ ಗಳನ್ನು ಇದು ಬಿಡುಗಡೆಗೊಳಿಸಿದೆ.
ಈಗ ಹೊಸ ವಿಷಯ ಏನಪ್ಪ ಅಂದ್ರೆ ನೋಕಿಯಾ ಕಂಪೆನಿ ಹೊಸ ಮಾಡೆಲ್ ಪರಿಚಯಿಸಲು ಮುಂದಾಗಿದೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಅಮೇರಿಕಾದ ಫೆಡರಲ್ ಕಮ್ಯುನಿಕೇಷನ್ ವೆಬ್ ಸೈಟ್ ನಲ್ಲಿ ನೋಕಿಯಾದ YA -1274 ಮಾಡೆಲ್ ನ ಸ್ಮಾರ್ಟ್ ಪೋನ್ ಕಾಣಿಸಿಕೊಂಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ನೋಕಿಯಾದ ಹೊಸ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.ಈ ಹೊಸ ಪೋನ್ ನಲ್ಲಿ 4380 ಎಂ ಎಎಚ್ ಬ್ಯಾಟರಿ ಸೇರಿದಂತೆ ಅನೇಕ ಹೊಸ ಫೀಚರ್ ಇರಲಿದೆ ಎಂದು ಹೇಳಲಾಗುತ್ತಿದೆ.
(ಗಲ್ಪ್ ಕನ್ನಡಿಗ)ಈ ಹೊಸ ಸ್ಮಾರ್ಟ್ ಪೋನ್ ಗೆ ಯಾವ ಹೆಸರು ಇಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಈ ಹೊಸ ಮೊಬೈಲ್ ಪೋನನ್ನು ಶೀಘ್ರ ಮಾರುಕಟ್ಟೆಗೆ ಪರಿಚಯಿಸಲು ನೋಕಿಯಾ ಒಡೆತನ ಹೊಂದಿರುವ HMD ಗ್ಲೋಬಲ್ ಕಂಪೆನಿ ತೀವ್ರ ಪ್ರಯತ್ನ ಪಡುತ್ತಿದೆ.