ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಶಾಕ್: 100 ರ ಸನಿಹಕ್ಕೆ ಬಂದ ಸಾವಿನ ಸಂಖ್ಯೆ
Thursday, July 23, 2020
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಭಾರಿ ಶಾಕ್ ನೀಡಿದೆ. ದ.ಕ ಜಿಲ್ಲೆಯಲ್ಲಿ ಇಂದು ಏಳು ಮಂದಿ ಸಾವನ್ನಪ್ಪಿದ್ದು ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ನೂರರ ಸನಿಹಕ್ಕೆ ಬಂದಿದೆ.
(ಗಲ್ಪ್ ಕನ್ನಡಿಗ) ಜಿಲ್ಲೆಯಲ್ಲಿ ಇಂದಿಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 99 ಆಗಿದೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಸಾವಿನ ಸಂಖ್ಯೆ ನೂರರ ಸನಿಹಕ್ಕೆ ಬಂದ ಜಿಲ್ಲೆ ದ.ಕ ವಾಗಿದೆ.
(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಏಳು ಮಂದಿ ಸಾವನ್ನಪ್ಪಿದ್ದು ಅವರ ವಿವರ ಈ ಕೆಳಗಿನಂತಿದೆ.
ದಾವಣಗೆರೆಯ 36 ವರ್ಷದ ಗಂಡಸು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 69 ವರ್ಷದ ಗಂಡಸು
ಕೇರಳ ಪಾಲಕ್ಕಾಡ್ ನ 52 ವರ್ಷದ ಗಂಡಸು
ಮಂಗಳೂರಿನ 83 ವರ್ಷದ ಗಂಡಸು
ಮಂಗಳೂರಿನ 73 ವರ್ಷದ ಗಂಡಸು
ಮಂಗಳೂರಿನ 58 ವರ್ಷದ ಹೆಂಗಸು
ಬಂಟ್ವಾಳದ 52 ವರ್ಷದ ಗಂಡಸು