ಸಮಾಜ ಸೇವಕ,ಸ್ನೇಹಮಹಿ ವ್ಯಕ್ತಿ ರಾಜು ಶ್ರೀಯಾನ್ ನಾವುಂದ ಹೃದಯಾಘಾತದಿಂದ ನಿಧನ
(ಗಲ್ಪ್ ಕನ್ನಡಿಗ) ಮುಂಬಯಿ : ಮುಂಬಯಿಯಲ್ಲಿರುವ ತುಳು ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಹಾಗೂ ಜನಾನುರಾಗಿ ವ್ಯಕ್ತಿತ್ವದ ಸಂಘಟನಾ ಚತುರ ರಾಜು ಶ್ರೀಯಾನ್ ನಾವುಂದ ಇಂದು (ಜು.23) ಹೃದಯಾಘಾತದಿಂದ ನಿಧನ ರಾಗಿದ್ದಾರೆ.
(ಗಲ್ಪ್ ಕನ್ನಡಿಗ)ಕೋಟಕ್ ಮಹೀಂದ್ರ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಸಹ ಅದರಿಂದ ಸ್ವತಃ ನಿರ್ವತ್ತಿಗೊಂಡು ಇತ್ತೀಚೆಗೆ ಸ್ವಉದ್ಯೋಗವನ್ನು ಪ್ರಾರಂಭಿಸಿದ್ದರು.
ಇವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಶ್ರೀಯಾನ್ ಶ್ರೇಷ್ಠ ಭರತನಾಟ್ಯ ಪಟುವಾಗಿದ್ದು "ಅರುಣೋದಯ ಕಲಾ ನಿಕೇತನ"ಅನ್ನುವ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯವನ್ನು ಕಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
(ಗಲ್ಪ್ ಕನ್ನಡಿಗ) ಕಲೆ,ಸಾಹಿತ್ಯ,ಸಂಸ್ಕೃತಿಯ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ ರಾಜು ಶ್ರೀಯಾನ್ ರವರು ಯಾವತ್ತೂ ಆಶಾವಾದಿಯಾಗಿ ಬದುಕಿದ ಧೀಮಂತ ವ್ಯಕ್ತಿ. ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ನಗರದ ಹಲವಾರು ತುಳು ಕನ್ನಡಿಗರ ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.