
ಈ ಸುದ್ದಿಯನ್ನು ನೀವು ನಂಬಿದ್ರಾ? ಬೈಡನ್ ಪ್ರಮಾಣ ವಚನಕ್ಕೆ ಮನಮೋಹನ್ ಸಿಂಗ್ ಗೆ ಆಹ್ವಾನ ಇದೆಯ?
Thursday, November 12, 2020
ಅಮೇರಿಕ ಚುನಾವಣೆಯಲ್ಲಿ ಬೈಡೆನ್ ಗೆಲುವು ಸಾಧಿಸುತ್ತಿದ್ದಂತೆ ಭಾರತದಲ್ಲಿ ಹಲವರ ವಾಟ್ಸಪ್ ಗೆ ಒಂದು ಸುದ್ದಿಯೊಂದು ಹರಿದಾಡಿದೆ. ಜೋ ಬೈಡನ್ ಅವರು ತಮ್ಮ ಪ್ರಮಾಣ ವಚನಕ್ಕೆ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿದರು ಎಂಬ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿಬಿಟ್ಟವು.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದರ ಜೊತೆಗೆ ಜೋ ಬೈಡನ್ ಮನಮೋಹನ್ ಸಿಂಗ್ ಅವರ ಜೊತೆಗೆ ಇರುವ ಪೊಟೋ ವನ್ನು ಲಗತ್ತಿಸಲಾಗಿತ್ತು. ಆದರೆ ಈ ಸುದ್ದಿ ಸುಳ್ಸುದ್ದಿ ಎಂಬುದು ಸಾಬಿತಾಗಿದೆ.
ಬೈಡನ್ ಅವರ ಆಹ್ವಾನ ಬಂದಿಲ್ಲ ಎಂದು ಮನಮೋಹನ್ ಸಿಂಗ್ ಅವರ ಕಚೇರಿಯೆ ಸ್ಪಷ್ಟಪಿಸಿದೆ. ಅಷ್ಟು ಮಾತ್ರವಲ್ಲದೆ ಅಮೇರಿಕದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳನ್ನು ಆಹ್ವಾನಿಸುವ ಸಂಪ್ರದಾಯವು ಇಲ್ಲ.
ಒಟ್ಟಿನಲ್ಲಿ ಅಮೇರಿಕದಲ್ಲಿ ಬೈಡನ್ ಅಧಿಕಾರಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಕಾರ್ಖಾನೆ ಈ ಸುದ್ದಿ ಮಾಡುವ ಮೂಲಕ ಸಾಕಷ್ಟು ಜನರನ್ನು ಬಕ್ರಾ ಮಾಡಿದ್ದಂತು ಸತ್ಯ