-->
ವಿಶ್ವನಾಥ್ ಅವರ ಆ ಒಂದು ಹೇಳಿಕೆಯಿಂದ ಸಂಪುಟ ಪುನಾರಚನೆ ನಡೆಯುತ್ತಾ?

ವಿಶ್ವನಾಥ್ ಅವರ ಆ ಒಂದು ಹೇಳಿಕೆಯಿಂದ ಸಂಪುಟ ಪುನಾರಚನೆ ನಡೆಯುತ್ತಾ?
(ಗಲ್ಪ್ ಕನ್ನಡಿಗ)ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಯಡಿಯೂರಪ್ಪ ಅವರು ನೆಮ್ಮದಿಯಾಗಿದ್ದಾರೆ. ಖಾಲಿ ಇರುವ ಸಚಿವ ಸ್ಥಾನವನ್ನು ಭರ್ತಿ ಮಾಡಲು ಸ್ಕೆಚ್ ಹಾಕುತ್ತಿದ್ದಾರೆ. ಆದರೆ ಹಳ್ಳಿ ಹಕ್ಕಿ ವಿಶ್ವನಾಥ್ ಅವರ ಹೇಳಿಕ ಸಚಿವ ಸಂಪುಟ ವಿಸ್ತರಣೆಯ ಸ್ಕೆಚ್ ನ್ನು ಬದಲಾಯಿಸಬಹದೆಂಬ ಕುತೂಹಲ ಸೃಷ್ಟಿಯಾಗಿದೆ.


(ಗಲ್ಪ್ ಕನ್ನಡಿಗ) ಹಿರಿಯ ರಾಜಕಾರಣಿಯಾಗಿರುವ ವಿಶ್ವನಾಥ್ ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿದ್ದಾಗ ಹೇಗೆ ನೇರ ಹೇಳಿಕೆಯಿಂದ ಇರಿಸು ಮುರುಸು ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಬಿಜೆಪಿಯಲ್ಲಿ ಕೂಡ ವಿಶ್ವನಾಥ್ ಅವರು ಇರಿಸು ಮುರಿಸು ಮಾಡುತ್ತಿದ್ದಾರೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

(ಗಲ್ಪ್ ಕನ್ನಡಿಗ) ಉಪಚುನಾವಣೆಯ ಫಲಿತಾಂಶದ ಬೆನ್ನಿಗೆ ಅವರು ಈಗ ಇರುವ ಸಚಿವರನ್ನು ಮುಂದುವರಿಸಿಕೊಂಡು ಹೋದರೆ ಗೆಲ್ಲುವುದು ಕಷ್ಟ ಎಂಬ ಹೇಳಿಕೆ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಚುನಾವಣೆಗೆ ಹೋಗಬೇಕೆಂದರೆ ಹೊಸಮುಖಗಳು ಬೇಕು. ಹೊಸಬರಿಗೆ ಅವಕಾಶ ನೀಡಿ ಸಚಿವ ಸಂಪುಟವನ್ನು ಪುನಾರಚನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.


(ಗಲ್ಪ್ ಕನ್ನಡಿಗ) ಈ ಹೇಳಿಕೆ ಮೂಲಕ ಹಾಲಿ ಸಚಿವ ರ ಬಗ್ಗೆ ಅಸಮಾಧಾನವನ್ನು , ತನಗೆ ಮಂತ್ರಿಗಿರಿ ಕೊಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ..


(ಗಲ್ಪ್ ಕನ್ನಡಿಗ)ಉಪಚುನಾವಣೆಗಳ ಫಲಿತಾಂಶ ಸಹಜವಾಗಿ ಆಡಳಿತ ಪಕ್ಷದ ಪರವಾಗಿ ಬರುತ್ತದೆ. ಹೀಗಾಗಿ ಸಾರ್ವತ್ರಿಕ ಚುನಾವಣೆಗೆ ಹೊಸಮುಖಗಳ ಸಚಿವ ಸಂಪುಟ ಬೇಕು ಎಂದು ಅವರು ಹೇಳಿದ್ದಾರೆ. ಇದರ ನಡುವೆ ನನಗೆ ಸಚಿವನಾಗುವ ವಿಶ್ವಾಸವಿದ್ದು , ನನ್ನ ಹಿರಿತನ , ತ್ಯಾಗಕ್ಕೆ ಬೆಲೆ ಸಿಗುತ್ತದೆ ಎಂಬುದನ್ನು ಹೇಳಿದ್ದಾರೆ.


(ಗಲ್ಪ್ ಕನ್ನಡಿಗ)ಈ ಹೇಳಿಕೆ ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನು ಬದಲಿಸುತ್ತದೆಯ ಎಂಬುದನ್ನು ಕಾದು ನೋಡಬೇಕಾಗಿದೆ..

(ಗಲ್ಪ್ ಕನ್ನಡಿಗ)

 

Ads on article

Advertise in articles 1

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us- Pay Rs 101

  

advertising articles 2

Advertise under the article

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us-Pay Rs 101