ಮಂಗಳೂರು: ತಿಮರೋಡಿಗೆ ಒಂದು ವರ್ಷ ರಾಯಚೂರಿಗೆ ಗಡಿಪಾರು
Tuesday, September 23, 2025
ಮಂಗಳೂರು: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಜಿಲ್ಲೆಯಿಂದ ಒಂದು ವರ್ಷ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು(ಎಸಿ) ಆದೇಶಿಸಿದ್ದಾರೆ. ಅದನ್ನು ಜಾರಿ ಮಾಡಲಾಗುತ್ತದೆ.
ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಪೊಲೀಸರ ಪರವಾಗಿ ಡಿಎಸ್ಪಿ ಬಂಟ್ವಾಳ ಮತ್ತು ತಿಮರೋಡಿ ಪರವಾಗಿ ವಕೀಲರು ಪ್ರಕರಣ ಮಂಡಿಸಿದರು. ಅವರಿಗೆ ಸರ್ಕಾರ ಅಥವಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.