ಮಂಗಳೂರು: ಬೆಳ್ಳಂಬೆಳಗ್ಗೆ ಅಮೆಝಾನ್ ಸುಗಂಧ ದ್ರವ್ಯ ತಯಾರಕಾ ಕಂಪೆನಿಯಲ್ಲಿ ಭಾರೀ ಅಗ್ನಿ ಅವಘಡ- ಅಪಾರ ನಾಶನಷ್ಟ
Wednesday, September 10, 2025
ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಕಾ ಕಂಪೆನಿಗೆ ಬುಧವಾರ ಮುಂಜಾನೆ 5ಗಂಟೆ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ನಾಶ ನಷ್ಟ ಸಂಭವಿಸಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಂಸಿಎಫ್, ಎನ್ಎಂಪಿಎ, ಮತ್ತು ಕದ್ರಿಯ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಢಾಯಿಸಿ ಬೆಂಕಿ ನಂದಿಸಿದೆ. ಆದರೆ ಸುಗಂಧದ್ರವ್ಯಕ್ಕೆ ಬೆಂಕಿ ತಗುಲಿ ಏಕಾಏಕಿ ಧಗಧಗನೇ ಉರಿದ ಪರಿಣಾಮ ಅಪಾರ ಪ್ರಮಾಣದ ನಾಶ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.