ಉತ್ತರಾಖಂಡ: ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಬಿಎಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು
Monday, September 8, 2025
ಉತ್ತರಾಖಂಡ: ಭಾರೀ ಮಳೆಯಿಂದ ಮೇಘಸ್ಫೋಟ ಸಂಭವಿಸಿ ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಹಲವಾರು ಕಡೆಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಆದ್ದರಿಂದ ಪಿಥೋರಗಢ ಮಾರ್ಗವಾಗಿ ಬಿಎಡ್ ಪರೀಕ್ಷೆ ಬರೆಯಲು ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ರಸ್ತೆ ಸಂಚಾರ ಸ್ಥಗಿತಗೊಂಡ ಪರಿಣಾಮ ಪರೀಕ್ಷೆಯಿಂದ ವಂಚಿತರಾಗುವ ಹಂತದಲ್ಲಿದ್ದರು. ಆದರೆ ಅಂತಿಮವಾಗಿ ಈ ನಾಲ್ವರು ವಿದ್ಯಾರ್ಥಿಗಳು ತೆಗೆದುಕೊಂಡ ನಿರ್ಧಾರ ಎಲ್ಲರೂ ಪ್ರಶಂಶಿಸುವಂತೆ ಮಾಡಿದೆ. ಈ ವಿದ್ಯಾರ್ಥಿಗಳು 280 ಕಿ.ಮೀ. ದೂರ ಕ್ರಮಿಸಬೇಕಿತ್ತು ಆದರೆ ಭೂಕುಸಿತದಿಂದ ರಸ್ತೆ ಸಂಚಾರ ಬಂದ್ ಆಗಿ ವಿದ್ಯಾರ್ಥಿಗಳು ಅರ್ಧ ದಾರಿಯಲ್ಲಿ ಸಿಲುಕಿದ್ದರು. ಈ ನಡುವೆ ಪರೀಕ್ಷೆ ಬರೆಯಲೇಬೇಕೆಂದು ನಿರ್ಧಾರ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಅಲ್ಲಿನ ಸ್ಥಳೀಯರೊಬ್ಬರು ಸಲಹೆಯೊಂದನ್ನು ನೀಡಿದ್ದರು ನೀವು ಪರೀಕ್ಷೆ ಬರೆಯಲೇ ಬೇಕೆಂದಿದ್ದರೆ ಹೆಲಿಕಾಪ್ಟರ್ ಬಾಡಿಗೆಗೆ ಪಡೆದುಕೊಳ್ಳಿ ಎಂದು. ಅದರಂತೆ ನಾಲ್ವರು ವಿದ್ಯಾರ್ಥಿಗಳು ಮಾತುಕತೆ ನಡೆಸಿ ಕೊನೆಗೆ ಹೆಲಿಕಾಪ್ಟರ್ ಬಾಡಿಗೆಗೆ ಪಡೆಯುವ ನಿರ್ಧಾರಕ್ಕೆ ಬರುತ್ತಾರೆ.
ರಾಜಸ್ಥಾನದ ಉಮಾರಾಮ್ ಜಾಟ್, ಮಗರಾಮ್ ಜಾಟ್, ಪ್ರ ಕಾಶ್ ಗೋದಾರ ಜಾಟ್ ಮತ್ತು ಲಕ್ಕಿ ಚೌಧರಿ ಎಂಬ ನಾಲ್ವರು ವಿದ್ಯಾರ್ಥಿಗಳು ಹಾನಿಯಲ್ಲಿರುವ ಮುಕ್ತ ವಿಶ್ವವಿದ್ಯಾಲಯವನ್ನು ತಮ್ಮ ಪರೀಕ್ಷಾ ಕೇಂದ್ರವನ್ನಾಗಿಸಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. ಬುಧವಾರ ಪರೀಕ್ಷೆ ನಡೆಯಬೇಕಿದ್ದು ಅದರಂತೆ ನಾಲ್ವರು ವಿದ್ಯಾರ್ಥಿಗಳು ರಾಜಸ್ಥಾನದಿಂದ ಆಗಸ್ಟ್ 31ರಂದು ಹೊರಟು ಮುನ್ಸಿಯಾರಿ ಪ್ರದೇಶ ತಲುಪಿದ್ದಾರೆ. ಆದರೆ ಹಲ್ಮಾನಿ-ಪಿಥೋರಗಢ ಮತ್ತು ತನಕ್‌ಪುರ-ಪಿಥೋರಗಢ ಮಾರ್ಗಗಳು ಭೂಕುಸಿತದಿಂದ ಮುಚ್ಚಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಹೆಲಿಕಾಪ್ಟರ್ ಪಯಣ:
ನಾವು ಪರೀಕ್ಷೆಯಿಂದ ವಂಚಿತರಾದರೆ ಒಂದು ವರ್ಷ ವ್ಯರ್ಥ ವಾಗುತ್ತದೆ ಎಂದು ಬೆಸಗೊಂಡಿದ್ದ ನಮಗೆ ಅಲ್ಲಿನ ವ್ಯಕ್ತಿಯೊಬ್ಬರು ಹೆಲಿಕಾಪ್ಟರ್ ಬಾಡಿಗೆ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು ಅದರಂತೆ ಹೆರಿಟೇಜ್ ಏವಿಯೇಷನ್ ಎಂಬ ಕಂಪನಿ ನಡೆಸುತ್ತಿದ್ದ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಂಡು ಬಾಡಿಗೆಗೆ ಪಡೆದು 280 ಕಿ.ಮೀ ದೂರದ ಪ್ರದೇಶವನ್ನು ಕೇವಲ 25-30 ನಿಮಿಷದಲ್ಲಿ ತ ಲುಪಿದೆವು ಎಂದು ಓರ್ವ ವಿದ್ಯಾರ್ಥಿ ಹೇಳಿದ್ದಾನೆ.