ಹುಟ್ಟುಹಬ್ಬದ ಸಂಭ್ರಮಲ್ಲಿದ್ದ 20ರ ಯುವತಿ ಮೇಲೆ ಗ್ಯಾಂಗ್‌ರೇಪ್
ಕೋಲ್ಕತ್ತಾ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವತಿಯ ಮೇಲೆ 20ರ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ.
ಹುಟ್ಟುಹಬ್ಬವೆಂದರೆ ಎಲ್ಲರಿಗೂ ಮರೆಯಲಾಗದ ಸಂತಸ. ಆದರೆ ಈ ಯುವತಿಗೆ ಸಂಭ್ರಮದ ಬದಲು, ಎಂದೂ ಅಳಿಸಲಾಗದ ಕಪ್ಪುಚಿಕ್ಕೆಯನ್ನು ಇಟ್ಟುಬಿಟ್ಟಿದೆ. ಹುಟ್ಟುಹಬ್ಬದಂದೇ 20ವರ್ಷದ ಯುವತಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕೊಲ್ಕತ್ತಾ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಗ್ಯಾಂಗ್ ರೇಪ್ ಬಳಿಕ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಯುವತಿಗೆ ಚಂದನ್‌ನೊಂದಿಗೆ ಸ್ನೇಹವಿತ್ತು. ಯುವತಿಯ ಹುಟ್ಟುಹಬ್ಬದ ಪಾರ್ಟಿ ನೆಪದಲ್ಲಿ ಚಂದನ್ ತನ್ನ ಸ್ನೇಹಿತ ದೀಪ್ ಮನೆಗೆ ಆಕೆಯನ್ನು ಕರೆದೊಯ್ದಿದ್ದ. ಅಲ್ಲಿ ಅವರು ಊಟಮಾಡಿದ್ದರು. ಆಕೆ ಮನೆಗೆ ಹೋಗುತ್ತೇನೆ ಎಂದು ಹೇಳಿದಾಗ ಆಕೆಯನ್ನು ಆರೋಪಿಗಳು ತಡೆದಿದ್ದಾರೆ. ಬಾಗಿಲನ್ನು ಲಾಕ್ ಮಾಡಿ ಇಬ್ಬರೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಮರುದಿನ ಬೆಳಗ್ಗೆ 10ಗಂಟೆ ಸುಮಾರಿಗೆ ಸಂತ್ರಸ್ತೆ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ಅವರು ಘಟನೆಯ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು, ಅದರ ನಂತರ ಶನಿವಾರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಯುವತಿ ತನ್ನ ದೂರಿನಲ್ಲಿ ಚಂದನ್‌ನೊಂದಿಗೆ ಕಳೆದ ಹಲವು ತಿಂಗಳಿನಿಂದ ತನಗೆ ಪರಿಚಯವಿತ್ತು. ದಕ್ಷಿಣ ಕೋಲ್ಕತ್ತಾದ ದೊಡ್ಡ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ಚಂದನ್ ತನ್ನನ್ನು ಪರಿಚಯಿಸಿಕೊಂಡಿದ್ದ. ಬಳಿಕ ದೀಪ್ನ ಪರಿಚಯ ಕೂಡ ಆಗಿತ್ತು. ಮೂವರೂ ಸಂಪರ್ಕದಲ್ಲಿದ್ದರು. ಇಬ್ಬರು ಆರೋಪಿಗಳು ಅವಳನ್ನು ಪೂಜಾ ಸಮಿತಿಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದ್ದರು.