ನಮ್ಮದು ಬರೀ ಪ್ರೀತಿಯಷ್ಟೇ, ಲವ್ ಜಿಹಾದ್ ಅಲ್ಲ- ನಮಗೇನಾದ್ರೂ ಆದ್ರೆ ಹಿಂದೂ ಸಂಘಟನೆಗಳೇ ಹೊಣೆ, ಮುಸ್ಲಿಂ ಯುವಕ- ಜೈನ ಯುವತಿ ಹೇಳಿಕೆಯ ವೀಡಿಯೋ ವೈರಲ್
ಕಲಬುರಗಿ: ಮುಸ್ಲಿಂ ಯುವಕಮೊಂದಿಗೆ ಜೈನ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ ಗ್ರಾಮದ ಜೈನ ಸಮುದಾಯದ ಯುವತಿ ಪಲ್ಲವಿ ಎಂಬಾಕೆ, ತನ್ನದೇ ಗ್ರಾಮದ ಡ್ರೈವರ್ ಮಶಾಕ್ ಎಂಬಾತನೊಂದಿಗೆ ನಾಪತ್ತೆಯಾಗಿದ್ದಳು.
ಇದು ಲವ್ ಅಲ್ಲ, ಲವ್ ಜಿಹಾದ್ ಎಂದು ಆಕೆಯ ಹೆತ್ತವರು ಆರೋಪಿಸಿದ್ದರು. ಇದೀಗ ಯುವತಿ ಹಾಗೂ ಯುವಕ ಇಬ್ಬರೂ ಜೊತೆಯಾಗಿ ಕುಳಿತು ವಿಡಿಯೋ ಸಂದೇಶ ಕಳಿಸಿದ್ದಾರೆ. ತಾನು ಇಷ್ಟ ಪಟ್ಟಂತೆ ಪ್ರೀತಿಸಿದ ಹುಡುಗನೊಂದಿಗೆ ಬಂದು ಮದುವೆಯಾಗಿದ್ದೇನೆ ಎಂದು ಯುವತಿ ಆ ವಿಡಿಯೋದಲ್ಲಿ ಹೇಳಿದ್ದಾಳೆ. ನಮಗೆ ಏನಾದ್ರೂ ಆದ್ರೆ ಹಿಂದೂ ಪರ ಸಂಘಟನೆಯವ್ರು, ನಮ್ಮ ಮನೆಯವರೇ ಜವಾಬ್ದಾರರು ಅಂತ ಪಲ್ಲವಿ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ಪಲ್ಲವಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆತ್ತವರ ಅನುಮಾನದಂತೆ ಈ ಯುವತಿ ಹೋಗಿದ್ದು ಅದೇ ಗ್ರಾಮದ ಮುಸ್ಲಿಂ ಯುವಕನೊಂದಿಗೆ ಅನ್ನೋದು ದೃಢವಾಗಿದೆ. ಹಿಂದೂ ಸಂಘಟನೆಗಳು ಹಾಗೂ ಯುವತಿಯ ಹೆತ್ತವರು ಲವ್ ಜಿಹಾದ್ ಆರೋಪ ಮಾಡಿದ್ದರು. ಇದೀಗ ಯುವತಿ ಹಾಗೂ ಯುವಕ ಇಬ್ಬರೂ ವಿಡಿಯೋ ಮಾಡಿದ್ದು, ತಾವು ಪ್ರೀತಿಸಿ ಮದುವೆಯಾಗಿದ್ದೇವೆ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಜೈನ ಯುವತಿ ಪಲ್ಲವಿ ಹಾಗೂ ಮುಸ್ಲಿಂ ಯುವಕ ಮಶಾಕ್ ಇಬ್ಬರೂ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಡಿಯೋ ಹರಿಬಿಟ್ಟಿದ್ದಾರೆ. ನನ್ನ ಕುಟುಂಬದವರು ನಾನು ಕಾಣೆಯಾಗಿದ್ದೇನೆಂದು ವಿವಿ ಠಾಣೆಗೆ ಕಂಪ್ಲೆಟ್ ಕೊಟ್ಟಿದ್ದಾರೆ. ಆದರೆ ನಾನು ಕಾಣೆ ಆಗಿಲ್ಲ. ನಾನು ಇಷ್ಟಪಟ್ಟಂತೆ ನಾನು ಪ್ರೀತಿಸಿದ ಹುಡುಗನ ಜೊತೆ ಬಂದು ಮದುವೆ ಆಗಿದ್ದೇನೆ ಅಂತ ಪಲ್ಲವಿ ಸ್ಪಷ್ಟಪಡಿಸಿದ್ದಾರೆ.
ನಾನು ಕಾಣೆಯಾಗಿದ್ದಕ್ಕೆ ನನ್ನ ಹುಡುಗನ ಫ್ರೆಂಡ್ಸ್‌ಗೆ ಮತ್ತು ಮನೆಯವರಿಗೆ ತೊಂದೆರೆ ಕೊಡ್ತಿದಾರೆ. ಹಾಗೇ ತೊಂದರೆ ಕೊಡಬೇಡಿ. ಇದರಲ್ಲಿ ಅವರ ಕೈವಾಡ ಏನಿಲ್ಲ ಅಂತ ಪಲ್ಲವಿ ಹೇಳಿದ್ದಾರೆ. ಹಿಂದೂ ಸಂಘಟನೆಯವರು ಲವ್ ಜಿಹಾದ್ ಅಂತೆಲ್ಲಾ ಹೇಳುತ್ತಿದ್ದಾರೆ. ನಮ್ಮ ಮನೆಯವರ ತಲೆ ಕೆಡಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಇದರಲ್ಲಿ ಲವ್ ಜಿಹಾದ್ ಏನೂ ಇಲ್ಲ.. ನಾವು ಮದುವೆಯಾಗಿದ್ದೇವೆ.. ಚೆನ್ನಾಗಿಯೇ ಇದ್ದೇವೆ. ನಮಗೆನೂ ತೊಂದರೆ ಆಗಿಲ್ಲ ಅಂತ ಹೇಳಿದ್ದಾರೆ. ಇನ್ನು ಮುಂದೆ ತೊಂದರೆ ಆದರೆ ಹಿಂದೂ ಸಂಘಟನೆಯವರೇ ಜವಾಬ್ದಾರಿ ಆಗ್ತಾರೆ ಅಂತ ಪಲ್ಲವಿ ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ ಗ್ರಾಮದ ಯುವತಿ ಪಲ್ಲವಿ ಹಾಗೂ ಅದೇ ಗ್ರಾಮದ ಡ್ರೈವರ್ ಮಶಾಕ್ ಎಂಬಾತ ಪ್ರೀತಿಸುತ್ತಿದ್ದರು. ಬಿಎಸ್ಸಿ ಓದಿದ್ದ ಪಲ್ಲವಿ, ಪರೀಕ್ಷೆ ಬರೆಯುತ್ತೇನೆ ಅಂತ ಹೋಗಿ, ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಅದೇ ದಿನ ಮಶಾಕ್ ಕೂಡ ಗ್ರಾಮದಿಂದ ನಾಪತ್ತೆಯಾಗಿದ್ದ. ಪ್ರೀತಿ- ಪ್ರೇಮದ ಹೆಸರಲ್ಲಿ ಯುವತಿಯನ್ನು ಮಶಾಕ್ ಪುಸಲಾಯಿಸಿದ್ದಾನೆ ಅಂತ ಆಕೆಯ ಹೆತ್ತವರು ಆರೋಪಿಸಿದ್ದರು. ಹೆತ್ತವರು ದೂರು ಸಲ್ಲಿಸಿ 10 ದಿನ ಕಳೆದ್ರೂ ವಿವಿ ಪೊಲೀಸರ ಕೈಗೆ ಮಾತ್ರ ಈ ಜೋಡಿ ಇನ್ನೂ ಸಿಕ್ಕಿಲ್ಲ.