-->
1,790ಕಿ.ಮೀ. ದೂರಕ್ಕೆ ಹಾರಿ ಮಾಲಕನನ್ನು ಅರಸಿ ಬಂದ ಪಾರಿವಾಳ- ಅತೀ ಸಣ್ಣ ವಯಸ್ಸಿಗೆ ದಾಖಲೆ

1,790ಕಿ.ಮೀ. ದೂರಕ್ಕೆ ಹಾರಿ ಮಾಲಕನನ್ನು ಅರಸಿ ಬಂದ ಪಾರಿವಾಳ- ಅತೀ ಸಣ್ಣ ವಯಸ್ಸಿಗೆ ದಾಖಲೆ


ಮಂಡ್ಯ: ಪಾರಿವಾಳಗಳ ರೇಸ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಈ ರೇಸ್ ಬಗ್ಗೆ ಹಲವರಿಗೆ ದೊಡ್ಡ ಕ್ರೇಜ್ ಇದೆ. ಕೆಲವರು ಪಾರಿವಾಳ ರೇಸ್‌ಗೆಂದೇ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಕೋಟಿ ರೂ. ಕೊಟ್ಟು ಸಾಮರ್ಥ್ಯವುಳ್ಳ ಪಾರಿವಾಳಗಳನ್ನೂ ಖರೀದಿಸುತ್ತಾರೆ. ಇಂತಹ ರೇಸ್‌ನಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಪಾರಿವಾಳವೊಂದು ಅತಿ ಸಣ್ಣ ವಯಸ್ಸಿಗೇ ದಾಖಲೆ ಬರೆದಿದೆ.

ಹೌದು. ದೆಹಲಿಯಿಂದ ಮಂಡ್ಯಕ್ಕೆ 1,790 ಕಿ.ಮೀ ಪ್ರಯಾಣ ಮಾಡಿರುವ ಈ ಒಂದು ವರ್ಷದ ಪಾರಿವಾಳವೊಂದು ತನ್ನ ಮಾಲಕನ ಬಳಿಗೆ ವಾಪಸ್ಸಾಗಿ ದಾಖಲೆ ನಿರ್ಮಿಸಿದೆ.

ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ದೆಹಲಿಯಲ್ಲಿ ಪಾರಿವಾಳಗಳ ರೇಸ್‌ನ್ನು ಆಯೋಜಿಸಿದ್ದರು. ಇದರಲ್ಲಿ ಮಂಡ್ಯದ ವಿ.ಸಿ ಫಾರಂನ ಶ್ರೀಧರ್ ಅವರಿಗೆ ಸೇರಿದ ಅಭಿಮನ್ಯು ಹೆಸರಿನ ಪಾರಿವಾಳವೊಂದು ಸತತ 52ದಿನಗಳ ಕಾಲ ಹಾರಾಟ ನಡೆಸಿ ದೆಹಲಿಯಿಂದ ಮಂಡ್ಯಕ್ಕೆ ಬಂದಿದೆ.

ಈ ರೇಸ್‌ನಲ್ಲಿ ಕರ್ನಾಟಕ, ತಮಿಳುನಾಡಿನ ಮೂಲದ ಒಟ್ಟು 22 ಪಾರಿವಾಳ ಭಾಗವಹಿಸಿದ್ದವು. ಪಾರಿವಾಳಗಳಿಗೆ ರೇಸ್‌ಗೂ ಮುನ್ನ ರಿಂಗ್ ಅಳವಡಿಕೆ ಮಾಡಲಾಗಿತ್ತು. ಎ.5ರಂದು ಎಲ್ಲಾ ಪಾರಿವಾಳಗಳನ್ನು ಹಾರಿಬಿಡಲಾಗಿತ್ತು. ಅಂದಿನಿಂದ ಒಟ್ಟು 1790 ಕಿ.ಮೀ ಹಾರಾಟ ನಡೆಸಿ ಮೇ.28ರಂದು ಅಭಿಮನ್ಯು ಮಾಲೀಕನ ಬಳಿಗೆ ಬಂದಿದೆ.

ಒಟ್ಟು 22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗೆ ವಾಪಸ್ಸಾಗಿದ್ದು, ಅದರಲ್ಲಿ ಅತಿ ಸಣ್ಣ ವಯಸ್ಸಿನ ಮಂಡ್ಯದ ಅಭಿಮನ್ಯು ದಾಖಲೆ ನಿರ್ಮಿಸಿದೆ. ಮೊದಲ ರೇಸ್‌ನಲ್ಲಿ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Ads on article

Advertise in articles 1

advertising articles 2

Advertise under the article