ಬೆಂಗಳೂರು: ಮನೆ ಕೆಲಸದವಳೊಂದಿಗೆ ಅಕ್ರಮ ಸಂಬಂಧ- ಟೆಕ್ಕಿ ಪತಿಯನ್ನು ಕೊಲೆಗೈದ ಪತ್ನಿ
Friday, July 4, 2025
ಬೆಂಗಳೂರು: ಮನೆ ಕೆಲಸದವಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಟೆಕ್ಕಿಯನ್ನು ಆತನ ಪತ್ನಿಯೇ ಕೊಲೆಗೈದಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.
ಸಾಫ್ಟ್‌ವೇರ್ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ (41) ಎಂಬಾತ ಕೊಲೆಯಾದವನು. ಶ್ರುತಿ ಕೊಲೆಗೈದ ಪತ್ನಿ.
ಶ್ರುತಿ ತನ್ನ ಪತಿಯ ಮುಖಕ್ಕೆ ಹಲ್ಲೆಗೈದು, ಕೊಲೆ ಮಾಡಿದ ಬಳಿಕ ಮೃತದೇಹಕ್ಕೆ ಸ್ನಾನ ಮಾಡಿಸಿ ಮಲಗಿಸಿದ್ದಲ್ಲದ್ದಾಳೆ. ಆನಂತರ ಬಾತ್‌ರೂಮ್‌ನಲ್ಲಿ ಜಾರಿ ಬಿದ್ದು ಗಾಯಗೊಂಡು ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ಪೊಲೀಸರಲ್ಲಿ ಕತೆ ಕಟ್ಟಿದ್ದಾಳೆ.
ಅಸಹಜ ಸಾವು ಪ್ರಕರಣದ ಕಾರಣ ಭಾಸ್ಕರ್ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ತಪಾಸಣೆ ಬಳಿಕ ಆತನ ಮುಖ ಮತ್ತು ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರು ಭಾಸ್ಕರ್ ಪತ್ನಿಯನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾಗ ಸತ್ಯಾಸತ್ಯತೆ ಹೊರಗೆ ಬಿದ್ದಿದೆ.
ಪತಿಯನ್ನು ಕೊಲೆ ಮಾಡಿದ ಬಳಿಕ ಕಥೆ ಕಟ್ಟುವುದಕ್ಕೆಂದೇ ಮೃತದೇಹವನ್ನು ಸ್ನಾನ ಮಾಡಿಸಿ ಮಲಗಿಸಿದ್ದ ವಿಚಾರವೂ ಬಹಿರಂಗವಾಗಿದೆ. ಇದೀಗ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾಸ್ಕರ್ ಮನೆ ಕೆಲಸದಾಕೆಯೊಂದಿಗೆ ಸದಾ ಸಲುಗೆಯಿಂದ ಇರುತ್ತಿದ್ದರು. ಆಕೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಪತಿ ಪತ್ನಿ ನಡುವೆ ಜಗಳವಾಗಿತ್ತು. ಎರಡು ದಿನಗಳ ಹಿಂದೆ ರಾತ್ರಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಗಲಾಟೆ ವೇಳೆ ಶ್ರುತಿ ಪತಿಯ ಮುಖಕ್ಕೆ ಕೋಪದಿಂದ ಬಲವಾಗಿ ಕೈಗೆ ಸಿಕ್ಕಿದ ವಸ್ತುವಿನಿಂದ ಬಲವಾಗಿ ಹೊಡೆದಿದ್ದಾಳೆ, ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾನೆ.
ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ ಭಾಸ್ಕರ್ ಶ್ರುತಿಯನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದರೂ. ಆದರೆ ಮನೆ ಕೆಲಸದವಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಶ್ರುತಿ ಕೋಪಕ್ಕೆ ಕಾರಣವಾಗಿತ್ತು. ಸಂಬಳ ಅಲ್ಲದೇ ಮನೆ ಬಾಡಿಗೆಯಿಂದಲೇ ತಿಂಗಳಿಗೆ 1.15 ಲಕ್ಷ ರೂ. ಆದಾಯ ಬರುತ್ತಿತ್ತು. ಬಂದ ಹಣವನ್ನು ಭಾಸ್ಕರ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಭಾಸ್ಕರ್ ನಿವಾಸಕ್ಕೆ ಬಾರದೇ ಸ್ನೇಹಿತೆಯ ಮನೆಯಲ್ಲೇ ಇರುತ್ತಿದ್ದರು. ಎರಡು ದಿನದ ಹಿಂದೆ ಮನೆಗೆ ಬಂದಾಗ ಪತ್ನಿ ಶ್ರುತಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಗೆ ತಿರುಗಿ ಶ್ರುತಿ ಪತಿಯನ್ನೇ ಹತ್ಯೆ ಮಾಡಿದ್ದಾಳೆ
ಪತಿ ಮನೆಗೆ ಕುಡಿದು ಬಂದು ಬಾತ್ ರೂಮ್‌ನಲ್ಲಿ ಜಾರಿ ಬಿದ್ದಿದ್ದಾರೆ. ಹೀಗಾಗಿ ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ, ಆದರೆ ನನ್ನ ಪತಿ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರಲ್ಲಿ ನಾಟಕವಾಡಲು ಹೋಗಿ ಜೈಲು ಪಾಲಾಗಿದ್ದಾಳೆ.