ಪ್ರಿಯತಮನ ನಂಬಿ ಪತಿಯ ತೊರೆದು ಬಂದ ಮಹಿಳೆ- ಬಸಿರು ಮಾಡಿ ಯುವಕ ಪರಾರಿ
ಕೋಲಾರ: ಪತಿಯನ್ನು ತೊರೆದು ಬಂದಿದ್ದ ಮಹಿಳೆಯನ್ನು ಪ್ರಿಯತಮ ಗರ್ಭಿಣಿ ಮಾಡಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ನ್ಯಾಯ ಕೋರಿ ಮಹಿಳೆ ಇದೀಗ ಅಂಬೇಡ್ಕರ್ ಫೋಟೋ ಹಿಡಿದು, ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಸುಭಾಷ್ ನಗರದ ಯುವಕ ವಂಚಿಸಿದ್ದಾನೆ ಎಂದು ಆರ್.ತಿಮ್ಮಸಂದ್ರ ಗ್ರಾಮದ ಮಹಿಳೆ ಆರೋಪಿಸಿದ್ದಾಳೆ. ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಿದ್ದಾಗ, ಆತನ ಸ್ನೇಹಿತನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದು, ಮಹಿಳೆ ಪತಿಯನ್ನು ತೊರೆದು ಬಂದಿದ್ದಳು. ಇದೀಗಗ ಮಹಿಳೆ 5 ತಿಂಗಳ ಗರ್ಭಿಣಿಯಾಗಿದ್ದು, ಯುವಕ ಮದುವೆಗೆ ನಿರಾಕರಿಸಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಗಂಡನನ್ನು ಬಿಟ್ಟು ಆತನ ಸ್ನೇಹಿತನ ಪ್ರೀತಿಯ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿ ಬಿದ್ದಿದ್ದಾಳೆ. ಅತ್ತ ಪತಿಯನ್ನು ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಇದರಿಂದ ಮಹಿಳೆ ಕಂಗಾಲಾಗಿದ್ದು, ಪ್ರತಿಭಟನೆ ಹಾದಿ ಹಿಡಿದಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.