-->
ಧರ್ಮ ಮರೆಮಾಡಿ ಹಿಂದೂ ಯುವತಿಯನ್ನು ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್

ಧರ್ಮ ಮರೆಮಾಡಿ ಹಿಂದೂ ಯುವತಿಯನ್ನು ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್


ಪ್ರತಾಪಗಢ (ಉತ್ತರ ಪ್ರದೇಶ): ಹಿಂದೂ ಧರ್ಮೀಯನೆಂದು ಸುಳ್ಳು ಹೇಳಿ ದೇವಾಲಯದಲ್ಲಿ ಹಿಂದೂ ಯುವತಿಯನ್ನು ವಿವಾಹವಾಗಲೆತ್ನಿದಿಸಿದ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಬೆಲ್ಲಾ ಮಾಯಿ ದೇವಾಲಯದ ಮುಖ್ಯ ಅರ್ಚಕ ಮಂಗಳ ಪ್ರಸಾದ್ ಎಂಬವರಿಂದ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಆರೋಪಿ ವಿರುದ್ಧ ಕ್ರಮ ಆರಂಭಿಸಲಾಗಿದೆ ಎಂದು ಪೂರ್ವ ವಿಭಾಗದ ಎಎಸ್‌ಪಿ ಶೈಲೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ದೇವಾಲಯದಲ್ಲಿ ಯುವತಿ ಮತ್ತು ವ್ಯಕ್ತಿ ಮದುವೆ ಆಗುತ್ತಿರುವುದನ್ನು ಗಮನಿಸಿದ ಅರ್ಚಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮದುವೆಯಾದ ಜೋಡಿಯ ಹೆಸರನ್ನು ಕೇಳಿದಾಗ ತನಗೆ ಅನುಮಾನ ಹುಟ್ಟಿದೆ ಎಂದು ಅರ್ಚಕರು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಯುವತಿ ತನ್ನ ಹೆಸರನ್ನು ಪ್ರಯಾಗ್‌ರಾಜ್‌ನ ಮಲಕಾದ ಶಾಲಿನಿ ಪ್ರತಾಪ್ ಎಂದು ಹೇಳಿದರೆ, ವ್ಯಕ್ತಿಯು ಮಲಾಕದ ರಾಜೀವ್ ಎಂದು ಹೇಳಿದ್ದಾಗಿ ಅರ್ಚಕರು ದೂರಿನಲ್ಲಿ ಉಲ್ಲೇಕಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಳಿಕ ವ್ಯಕ್ತಿ ಬಳಿ ಆಧಾರ್ ಕಾರ್ಡ್ ಕೇಳಿದಾಗ, ಆತ ತನ್ನ ಹೆಸರು ಮತ್ತೂಬ್ ಅಲಂ ಎಂದು ಹೇಳಿದ್ದಾನೆ‌. ಪ್ರಯಾಗ್‌ರಾಜ್‌ನ ಚಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಒತ್ತಾಯಪೂರ್ವಕವಾಗಿ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದ ವ್ಯಕ್ತಿ, ಮತಾಂತರಕ್ಕೆ ಒತ್ತಡವನ್ನೂ ಹಾಕಿದ್ದ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಂಧಿತನ ವಿರುದ್ಧ ಕಾನೂನುಬಾಹಿರ ಮತಾಂತರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article