ಗೋಮಾಂಸ ತಿನ್ನುವಂತೆ ಒತ್ತಾಯ, ಮಂತಾಂತರಕ್ಕೆ ಯತ್ನ: ಫೇಸ್‌ಬುಕ್‌ನಲ್ಲಿ ಪರಿಚಿತನಾದ ಮುಸ್ಲಿಂ ಯುವಕನ ವಿವಾಹವಾಗಿದ್ದ ಹಿಂದೂ ಯುವತಿಯ ಅಳಲು
Monday, July 7, 2025
ಪಾಟ್ನಾ: ಫೇಸ್‌ಬುಕ್‌ನಲ್ಲಿ ಪರಿಚಿತನಾದ ಮುಸ್ಲಿಂ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಯುವತಿಯನ್ನು ಗೋಮಾಂಸ ತಿನ್ನಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಘಟನೆ ಬಿಹಾರದಲ್ಲಿ ನಡೆದಿದೆ. ಸಂತ್ರಸ್ತೆ ಇದೋಗ ಪೊಲೀಸ್ ದೂರು ನೀಡಿ ತನ್ನನ್ನು ತನ್ನದೇ ಊರಿಗೆ ತಲುಪಿಸುವಂತೆ ಅಳಲು ತೋಡಿಕೊಂಡಿದ್ದಾಳೆ.
ಮಧ್ಯಪ್ರದೇಶದ ಇಂದೋರ್ ಮೂಲದ ಆರತಿ ಎಂಬಾಕೆ, ಬಿಹಾರದ ಬೆಗುಸರಾಯ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಶಹಬಾಜ್ ಎಂಬಾತನನ್ನು ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದಳು. ಇದೀಗ ಆತ ತನ್ನನ್ನು ಗೋಮಾಂಸ ತಿನ್ನುವಂತೆ ಹಾಗೂ ಇಸ್ಲಾಮಿಗೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಾನೆ. ಅಲ್ಲದೆ ನ್ನ ಮೊಬೈಲಿನಲ್ಲಿದ್ದ ಹಿಂದೂ ದೇವರುಗಳ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ. ಮತಾಂತರವಾಗಲು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಫೇಸ್ಬುಕ್‌ನಲ್ಲಿ ಪರಿಚಯವಾದ ಸಂದರ್ಭ ಆತ ತನ್ನನ್ನು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಆದರೆ ಬಿಹಾರಕ್ಕೆ ಬಂದು ನೋಡಿದಾಗ ಆತ ಅಂಗಡಿಯೊಂದರಲ್ಲಿ ಮಾಲೆ ನೇಯುವ ಕೆಲಸ ಮಾಡುತ್ತಿದ್ದ. ಆದರೂ ಆತನೊಂದಿಗೆ ವಾಸ ಮಾಡಿದ್ದೆ. ಈಗ ಈ ರೀತಿ ಮಾಡುತ್ತಿರುವುದರಿಂದ ನನ್ನನ್ನು ಬದುಕಲು ಬಿಡುತ್ತಾನೆಂಬ ನಂಬಿಕೆಯಿಲ್ಲ. ನಾನು ಆತನ ವಿರುದ್ಧ ದೂರು ಕೊಟ್ಟು ಎಫ್‌ಐಆರ್ ದಾಖಲಿಸಲು ಹೇಳುವುದಿಲ್ಲ. ಆದರೆ ನನ್ನನ್ನು ಮರಳಿ ಇಂದೋರ್ ತಲುಪಿಸಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾಳೆ.
ಮದುವೆಯಾಗಿ ಬಂದ ಬಳಿಕ ಹೆತ್ತವರೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ. ಅವರು ನಾನು ಸತ್ತಿರಬಹುದು ಎಂದು ಭಾವಿಸಿರಬಹುದು. ಆದರೆ ಮರಳಿ ನನ್ನ ಊರಿಗೆ ಹೋಗಲೇಬೇಕೆಂದು ಈಗ ಬಯಕೆಯಾಗಿದೆ ಎಂದು ಆಕೆ ತಿಳಿಸಿದ್ದಾಳೆ. ಆದರೆ ಶಹಬಾಜ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಆಕೆ ಮಕ್ಕಳಾಗದಂತೆ ಆಪರೇಶನ್ ಮಾಡಿಕೊಂಡಿದ್ದಾಳೆ. ಮುಂದೆಯೂ ಮಕ್ಕಳು ಆಗಲ್ಲ. ಜೊತೆಗೆ ಆಕೆ ಪರಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ. ನನ್ನ ಜೊತೆಗಿದ್ದ ಐದು ವರ್ಷದಲ್ಲಿ ಮೂರು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಸುಭೋದ್ ಕುಮಾರ್, ಸಂತ್ರಸ್ತೆ ತನ್ನ ಪತಿಯ ವಿರುದ್ಧ ದೂರು ಕೊಡಲು ಮುಂದೆ ಬರುತ್ತಿಲ್ಲ. ತನ್ನನ್ನು ಮರಳಿ ಇಂದೋರ್ ತಲುಪಿಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾಳೆ. ಸದ್ಯಕ್ಕೆ ನಿಗಾ ಕೇಂದ್ರದಲ್ಲಿ ಇರಿಸಿದ್ದು, ಇಂದೋರ್ ತಲುಪಿಸಲು ಮಾಡುತ್ತೇವೆ ಎಂದಿದ್ದಾರೆ.