ಸಮಂತಾ, ಸಾಯಿ ಪಲ್ಲವಿ ಮುಂತಾದ ಟಾಪ್ ಹೀರೋಯಿನ್‌ಗಳ ಹಿಂದಿರುವ ಧ್ವನಿ ರಾಯಚೂರು ಯುವಕನದ್ದು..!
Sunday, July 6, 2025
ರಾಯಚೂರು ಜಿಲ್ಲೆಯ ಆಧ್ಯ ಹನುಮಂತು ಎಂಬ ಈ ಯುವಕನ ಧ್ವನಿಗೆ ಟಾಲಿವುಡ್ ನಾಯಕಿಯರೇ ಫಿದಾ ಆಗಿದ್ದಾರೆ. ಕನ್ನಡ, ತಮಿಳು, ತೆಲುಗಿನಲ್ಲಿ ನಾಯಕಿಯರಿಗೆ ಡಬ್ ಮಾಡಿ ಇವರು ಸೈ ಎನಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಸಮಂತಾ ಸೇರಿದಂತೆ ಸ್ಟಾರ್ ಟಾಪ್ ಹೀರೋಯಿನ್‌ಗಳ ಹಿಂದಿರುವ ಧ್ವನಿ ರಾಯಚೂರು ಈ ಯುವಕನದ್ದೇ...!
ಸಾಯಿ ಪಲ್ಲವಿ ಅಭಿನಯದ ಶ್ಯಾಮ್ ಸಿಂಗರಾಯ್, ಫಿದಾ, ಲವ್ ಸ್ಟೋರಿ, ಅಮರನ್‌ಗೂ ಆಧ್ಯ ಹನುಮಂತು ಧ್ವನಿ ನೀಡಿದ್ದಾರೆ. ಆಹಾ, ಓ ಬೇಬಿ, ಶಾಕುಂತಲಂ, ಯೂ ಟರ್ನ್ ಸಿನಿಮಾಗಳಲ್ಲಿ ನಟಿ ಸಮಂತಾ ಅವರಿಗೆ ಕಂಠದಾನ ಮಾಡಿದ್ದಾರೆ. ಇವರಲ್ಲದೆ ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ, ರುಕ್ಮಿಣಿ ವಸಂತ, ನಿಧಿ ಅಗರ್ವಾಲ್ ಸೇರಿದಂತೆ ಸುಮಾರು 16 ಮಂದಿ ನಾಯಕಿಯರಿಗೆ ಇವರು ಕಂಠದಾನ ಮಾಡಿದ್ದಾರೆ. 16ನಾಯಕಿಯರು, 25ಕ್ಕೂ ಅಧಿಕ ಸಿನಿಮಾಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ ಆಧ್ಯ ಹನುಮಂತು.
ಎಂಬಿಬಿಎಸ್ ಮುಗಿಸಿ ಸದ್ಯ ಚಿಕ್ಕಬಳ್ಳಾಪುರದಲ್ಲಿ ಎಂಬಿಎ ಓದುತ್ತಿದ್ದಾರೆ ಆಧ್ಯಾ ಹನುಮಂತುಗೆ ಅವಕಾಶಗಳ ಸುರಿಮಳೆಯೇ ಬರುತ್ತಿದೆಯಂತೆ. ಈ ಸುದ್ದಿ ಎಂಥವರನ್ನೂ ಅಚ್ಚರಿ ಮೂಡಿಸದೆ ಇರದು. ಏಕೆಂದರೆ ನಟಿಯರಿಗೆ ಓರ್ವ ಯುವಕ ಧ್ವನಿ ನೀಡುವುದು ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ತಕ್ಕಂತೆ ಧ್ವನಿಯನ್ನೂ ಬದಲಾವಣೆ ಮಾಡಬೇಕು.
ಆಧ್ಯ ಹನುಮಂತುಗೆ 2022ರಲ್ಲಿ ಅತ್ಯುತ್ತಮ ಡಬ್ಬಿಂಗ್ ಕಲಾವಿದ ಪ್ರಶಸ್ತಿ ಮತ್ತು 2023ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಧ್ವನಿ ಪ್ರಶಸ್ತಿ ದೊರೆತಿದೆ.