
ಟೆಸ್ಲಾದ ಎಲಾನ್ ಮಸ್ಕ್‌ಗೆ 14ನೇ ಮಗು!
Sunday, March 2, 2025
ಟೆಸ್ಲಾದ ಎಲಾನ್ ಮಸ್ಕ್‌ಗೆ 14ನೇ ಮಗು!
ತನ್ನ ಉದ್ಯೋಗಿ ಶಿವಾನ್ ಝಿಲಿಸ್‌ನಿಂದ ತಾನು 14ನೇ ಮಗುವನ್ನು ಪಡೆದಿರುವಾಗಿ ಟೆಸ್ಲಾ ಉದ್ಯಮಿ ಎಲಾನ್ ಮಸ್ಕ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಮಸ್ಕ್ ದೃಢಪಡಿಸಿದ್ದಾರೆ.
ಮಸ್ಕ್ ಮತ್ತು ಝಿಲಿಸ್ ತಮ್ಮ ಅವಳಿ ಮಕ್ಕಳಾದ ಸ್ಪೈಡರ್ ಮತ್ತು ಆಝರೆ ಹಾಗೂ ಒಂದು ವರ್ಷದ ಪುತ್ರಿ ಅರ್ಕಾಡಿಯಾಳ ಚಿತ್ರಗಳನ್ನು ಮಸ್ಕ್ ಹಂಚಿಕೊಂಡಿದ್ದಾರೆ.
ಪುತ್ರ ಸೆಲ್ಡನ್ ಲೈಕುರ್ಗಸ್ ಆಗಮನವನ್ನು ಝಿಲಿಸ್ ತಮ್ಮ ಎಸ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದರು.
ಮಸ್ಕ್‌ರ 13ನೇ ಮಗುವಿಗೆ ತಾನು ಜನ್ಮ ನೀಡಿದ್ದೇನೆ ಎಂದು 26 ವರ್ಷದ ಆಸ್ಲೇ ಕ್ಲೇರ್ ಹೇಳಿಕೊಂಡ ಕೆಲವೇ ಸಮಯದಲ್ಲಿ 14ನೇ ಮಗುವಿನ ವಿಚಾರ ದೃಢಪಟ್ಟಿದೆ.