
ಶಬರಿಮಲೆ ಯಾತ್ರಿಗಳಿಗೆ ಮಹತ್ವದ ಪ್ರಕಟಣೆ ಅರಣ್ಯ ಮೂಲಕ ಬರುವ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ
Wednesday, December 18, 2024
ಶಬರಿಮಲೆ ಯಾತ್ರಿಗಳಿಗೆ ಮಹತ್ವದ ಪ್ರಕಟಣೆ ಅರಣ್ಯ ಮೂಲಕ ಬರುವ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ
ಇದು ಶಬರಿಮಲೆ ಯಾತ್ರಿಗಳಿಗೆ ಸಂಬಂಧಿಸಿದ ಮಹತ್ವದ ಪ್ರಕಟಣೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಅರಣ್ಯ ಮೂಲಕ ಬರುವ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ಹುಲ್ಲ ಮೇಡು ಮತ್ತು ಎದುರುಮಲೆಯ ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಆಗಮಿಸುವ ಯಾತ್ರಿಗಳಿಗೆ ಸಿಹಿ ಸುದ್ದಿ.
ಇಂತಹ ಕಾಲ್ನಡಿಗೆಯಲ್ಲಿ ಸಾಗಿ ಬರುವ ಭಕ್ತರಿಗೆಂದೇ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವಿಷಯವನ್ನು ತಿರುವಾಂಕೂರು ದೇವಸ್ಥಾನ ಮಂಡಳಿಯ ಅಧ್ಯಕ್ಷ ಶ್ರೀ ಪಿ ಎಸ್ ಪ್ರಶಾಂತ್ ಅವರು ತಿಳಿಸಿದ್ದಾರೆ.
ಹೀಗೆ ದೂರದಿಂದ ಕಾಲ್ನಾಡಿಗೆ ಮೂಲಕ ಬರುವ ಯಾತ್ರಿಗಳಿಗೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶೇಷವಾದ ಟ್ಯಾಗ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿರುವಾಂಕೂರು ದೇವಸ್ಥಾನ ಮಂಡಳಿ ತಿಳಿಸಿದೆ.