ಕೃಷಿಕರಿಗೆ ಮಹತ್ವದ ಸೂಚನೆ: ಸಬ್ಸಿಡಿ ಆಧಾರಿತ "ಕಂಬೈನ್ಡ್ ಹಾರ್ವೆಸ್ಟರ್ ಹಬ್" ರಚನೆಗೆ ಅರ್ಜಿ ಆಹ್ವಾನ
ಕೃಷಿಕರಿಗೆ ಮಹತ್ವದ ಸೂಚನೆ: ಸಬ್ಸಿಡಿ ಆಧಾರಿತ "ಕಂಬೈನ್ಡ್ ಹಾರ್ವೆಸ್ಟರ್ ಹಬ್" ರಚನೆಗೆ ಅರ್ಜಿ ಆಹ್ವಾನ
ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ ವಲಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಹಬ್ ರಚನೆಗೆ ಆಸಕ್ತ ವೈಯಕ್ತಿಕ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವೈಯಕ್ತಿಯ ಫಲಾನುಭವಿಗಳು ಅರ್ಜಿಯೊಂದಿಗೆ ಪಹಣಿ ಪತ್ರ, ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ಪ್ರತಿ, ನಿಗಧಿತ ಮೊತ್ತದ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರದೊಂದಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿ ಆಗಸ್ಟ್ 20 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸದ್ರಿ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಹಾಗೂ ಬೇಲರ್ ಅನ್ನು ಕಡ್ಡಾಯವಾಗಿ ಖರೀದಿಸಬೇಕು. ಇವುಗಳೊಂದಿಗೆ ಹಾರ್ವೆಸ್ಟರ್ ಹಬ್‌ಗೆ ಅನುಮತಿಸಲಾದ ಇತರೆ ಉಪಕರಣಗಳನ್ನು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸಬಹುದಾಗಿದೆ.
ವೈಯಕ್ತಿಕ ಫಲಾನುಭವಿಗಳಿಗೆ ಪ್ರತಿ ಹಾರ್ವೆಸ್ಟರ್ ಹಬ್‌ಗೆ ಉಪಕರಣವಾರು ಗರಿಷ್ಠ ಮಿತಿಗೊಳಪಟ್ಟು ಶೇ. 50 ರ ಸಹಾಯಧನ ಅಥವಾ 40 ಲಕ್ಷ ರೂ. ಮೀರದಂತೆ ಸಹಾಯಧನವನ್ನು ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮುಖಾಂತರ ಒದಗಿಸಲಾಗುವುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.